ಅತಿವೃಷ್ಠಿಯಿಂದ ಭತ್ತದ ಬೆಳೆ ಹಾನಿ – ರೈತರಿಂದ ದೂರು ಸ್ವೀಕಾರ
ಮಂಗಳೂರು ಸೆ 22:- 2020-21ನೇ ಸಾಲಿನ ಮುಂಗಾರಿನಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಕೃಷಿ ಭೂಮಿಗೆ ನೀರು ನುಗ್ಗಿ ನಷ್ಟ ಉಂಟಾಗಿದೆ.
ಸಮಸ್ಯೆಗೊಳಗಾದ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕು.
ಭತ್ತದ ಬೆಳೆ ವಿಮೆ ಮಾಡಿಸಿದ ರೈತರು ಮಿಡ್ ಸೀಸನ್ ಅಡ್ವರ್‍ಸಿಟಿ (Mid season adversity) ಅಡಿಯಲ್ಲಿ 72 ಗಂಟೆಯೊಳಗಾಗಿ ಸಂಬಂಧಿಸಿದ ವಿಮಾ ಸಂಸ್ಥೆಗೆ ಅಥವಾ ವಿಮೆ ಮಾಡಿಸಿದ ಬ್ಯಾಂಕಿಗೆ ದೂರು ದಾಖಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಮಂಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.