ಬಂಟ್ವಾಳ ತಾ: ವಿಕಲಚೇತನ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

 ಬಂಟ್ವಾಳ ತಾ: ವಿಕಲಚೇತನ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
Share this post

ಮಂಗಳೂರು ಆಗಸ್ಟ್ 28: ಬಂಟ್ವಾಳ ತಾಲೂಕಿನ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಒಬ್ಬರಂತೆ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾದ ವಿಕಲಚೇತನ (ಅಂಗಲವಿಕಲ)ರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆರೆಂದು ನೇಮಕ ಮಾಡಲು ಅವಕಾಶವಿದ್ದು ಅವರಿಗೆ ಮಾಸಿಕ ರೂ 6,000 ಗೌರವಧನವನ್ನು ನೀಡಲಾಗುತ್ತದೆ.


   ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯತ್‍ಗಳ ವಿವರ ಇಂತಿವೆ: ಗೋಳ್ತಮಜಲು, ಕರಿಯಂಗಳ, ಕಳ್ಳಿಗೆ, ಅಮ್ಮುಂಜೆ, ನರಿಕೊಂಬು, ಇರ್ವತ್ತೂರು, ಸಜೀಪಮುನ್ನೂರು, ಬಾಳ್ತಿಲ, ನಾವೂರು, ಸಜಿಪಮೂಡ, ಉಳಿ, ಬಾಳೆಪುಣಿ, ಪುದು, ತುಂಬೆ, ಕುರ್ನಾಡು, ಫಜೀರು, ಸಜೀಪನಡು, ಸಜೀಪಪಡು, ಮೇರಮಜಲು, ಪಂಜಿಕಲ್ಲು ಹಾಗೂ ಬಡಗಬೆಳ್ಳೂರು ಗ್ರಾಮ ಪಂಚಾಯತ್. ಆಸಕ್ತ ವಿಕಲಚೇತನರು ಸೆಪ್ಟೆಂಬರ್ 21 ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಬಂಟ್ವಾಳ ಕೈಕುಂಜೆ ಬಿ.ಸಿ.ರೋಡ್ ಬಂಟ್ವಾಳ ಇಲ್ಲಿ ಅರ್ಜಿ ಸಲ್ಲಿಸಬಹುದು.

      ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕೈಕುಂಜೆ ಬಿ.ಸಿ.ರೋಡ್ ಬಂಟ್ವಾಳ, ದೂರವಾಣಿ ಸಂಖ್ಯೆ- 08255 232465 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.  

Subscribe to our newsletter!

Other related posts

error: Content is protected !!