Tags :Applications

Uttara Kannada

ವಸತಿ ಶಾಲೆ: ಅರ್ಜಿ ಆಹ್ವಾನ

ಕಾರವಾರ, ನ 23: ಕರ್ನಾಟಕ ವಸತಿ ಶಿಕ್ಷಣ ಸಂಘದ ಅಧೀನದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿ ಉಳಿದ ಸ್ಥಾನಗಳನ್ನು ಭರ್ತಿ ಮಾಡಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಅರ್ಜಿ ಆಹ್ವಾನಿಸಿದೆ. 6 ಮತ್ತು 7ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಮತ್ತು ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಆಸಕ್ತ ವಿದ್ಯಾರ್ಥಿಗಳು ಡಿಸೆಂಬರ್ 1 ರೊಳಗಾಗಿ ಆನ್‍ಲೈನ್ […]Read More

ಅರ್ಜಿ ಆಹ್ವಾನ

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ – ಅರ್ಜಿ ಆಹ್ವಾನ

ಉಡುಪಿ, ನ 23: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲಾ ಕಛೇರಿಯಿಂದ 2020-21ರ ಸಾಲಿನಲ್ಲಿ ಶುದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ನೋಂದಾಯಿತ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಕಲಾತಂಡಗಳನ್ನು ಪ್ರಾಯೋಜನೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಲಾತಂಡಗಳ ಪ್ರಾಯೋಜನೆ ಕೋರಿ ಅರ್ಜಿ ಸಲ್ಲಿಸುವ ಸಂಘ-ಸಂಸ್ಥೆಯವರು ಸೇವಾಸಿಂಧು ಮುಖಾಂತರ, ತಮ್ಮ ಕಾರ್ಯಕ್ರಮದ 15 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವುದು. “ಸೇವಾಸಿಂಧು” ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಸಂಘ-ಸಂಸ್ಥೆಗಳ ಕಾರ್ಯಕ್ರಮಕ್ಕೆ ಕಲಾತಂಡಗಳನ್ನು ಇಲಾಖೆಯಿಂದ ನಿಯಮಾನುಸಾರ ಪ್ರಾಯೋಜನೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ […]Read More

ಅರ್ಜಿ ಆಹ್ವಾನ

ಅತಿಥಿ ಶಿಕ್ಷಕರ ಹುದ್ದೆ-ಅರ್ಜಿ ಆಹ್ವಾನ

ಉಡುಪಿ, ನ 21: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಲ್ಮರ ಮತ್ತು ಕಾಪು ತಾಲೂಕಿನ ಮಲ್ಲಾರುವಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ನವೆಂಬರ್ 30 ರ ಒಳಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಪಶು ಚಿಕಿತ್ಸಾಲಯದ ಹತ್ತಿರ, ಶಿವಳ್ಳಿ, ಅಲೆವೂರು ರಸ್ತೆ, ಮಣಿಪಾಲ, ಉಡುಪಿ […]Read More

ಕನ್ನಡ

ಕೋಳಿ ಮತ್ತು ಪಶು ಆಹಾರ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ

ಮಂಗಳೂರು ನ 21: ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ ತಯಾರಿಕೆ ಮತ್ತು ಮಾರಾಟ. ನಿಯಂತ್ರಣ  ಆಜ್ಞೆ 1987ರಂತೆ ಕೋಳಿ ಮತ್ತು ಪಶು ಆಹಾರಗಳ ಉತ್ಪಾದಕರು ಮತ್ತು ಮಾರಾಟಗಾರರು 2020-21ನೇ ಸಾಲಿನಿಂದ ನೂತನ ಪರವಾನಿಗೆ ಅಥವಾ ನವೀಕರಣಗಳಿಗೆ ಪಶುಸಂಗೋಪನಾ ಇಲಾಖೆಯಿಂದ ವಿವಿಧ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪಶುವೈದ್ಯಧಿಕಾರಿ ಅಥವಾ ಹಿರಿಯ ಪಶು ವೈದ್ಯಧಿಕಾರಿಗಳನ್ನು ರಾಜ್ಯಾದ್ಯಂತ ಅವರ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರ ಮತ್ತು ಮಾರಾಟ ಕೇಂದ್ರಗಳ ಪರಿಶೀಲನೆಗಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿರುವ ಕುಕ್ಕುಟ ಮತ್ತು […]Read More

ಅರ್ಜಿ ಆಹ್ವಾನ

ಸ್ವಯಂ ಉದ್ಯೋಗ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಮಂಗಳೂರು ನ 20:  ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರಸ್ತುತ ಸಾಲಿಗೆ “ಇ-ವಾಣಿಜ್ಯ ಸಂಸ್ಥೆಗಳಾದ Zomato, Swiggy, Uber Eats, Amazon ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಯುವಕರಿಗೆ ರೂ. 25,000 ಗಳ ಸಹಾಯಧನ ಹಾಗೂ ಉಳಿಕೆ ಮೊತ್ತವನ್ನು ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ 2ಎ, 3ಎ ಮತ್ತು 3ಬಿ ವರ್ಗದ ಅರ್ಹ ಫಲಾನುಭವಿಗಳು www.dbcdc.karnataka.gov.in ನಲ್ಲಿ ಅರ್ಜಿ […]Read More

ಕನ್ನಡ

ಸೈನಿಕ ಶಾಲೆ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ, ನ 19: ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಅವಧಿಯನ್ನು ಡಿಸೆಂಬರ್ 3 ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 0120-6895200 ಅಥವಾ [email protected] ಸಂಪರ್ಕಿಸುವಂತೆ ಕೊಡಗು ಸೈನಿಕ ಶಾಲೆಯ ಪ್ರಕಟಣೆ ತಿಳಿಸಿದೆ.Read More

ಕನ್ನಡ

ಪ್ರಾಣಿ ದಯಾ ಸಂಘ ರಚನೆ-ಪದಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು ನ 19: ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ರಚನೆ ಮಾಡಲು ಸರ್ಕಾರೇತರ ಪದಾಧಿಕಾರಿಗಳ ಹುದ್ದೆಗಳಿಗೆ ಜಿಲ್ಲೆಯಲ್ಲಿನ ಪ್ರಾಣಿ ಪ್ರಿಯರು, ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿಕೊಂಡವರು, ಗೋಶಾಲೆ ನಡೆಸುತ್ತಿರುವವರು ಮತ್ತು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಣಿ ಕಲ್ಯಾಣದಲ್ಲಿ ಆಸಕ್ತಿ ಉಳ್ಳವರು ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ದ.ಕ., ಮಂಗಳೂರು ಕಛೇರಿಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 26 ರೊಳಗೆ ಸಲ್ಲಿಸಬೇಕು.   ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0824-2492337 ನ್ನು ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ ಉಪ […]Read More

ಅರ್ಜಿ ಆಹ್ವಾನ

ಇನ್ಕ್ಯುಬೇಷನ್ ಕಾರ್ಯಕ್ರಮ – ಅರ್ಜಿ ಆಹ್ವಾನ

ಉಡುಪಿ, ನ 11: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್, ಧಾರವಾಡ) ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರ ಪುರಸ್ಕೃತ ಸಂಕಲ್ಪ ಯೋಜನೆ ಅಡಿಯಲ್ಲಿ ಇನ್ಕ್ಯುಬೇಷನ್ ಪ್ರೋಗ್ರಾಮ್ ಮೂಲಕ ಹೊಸ ಉದ್ಯಮ ಸ್ಥಾಪಿಸುವವರಿಗೆ ನವೆಂಬರ್ ನಾಲ್ಕನೇ ವಾರದಲ್ಲಿ ಉಚಿತವಾಗಿ 6 ದಿನಗಳ  ಸಂಕಲ್ಪ ಇನ್ಕ್ಯುಬೇಷನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಜಂಟಿ ನಿರ್ದೇಶಕರು, ಸಿಡಾಕ್, ಮೊದಲನೆಯ ಮಹಡಿ, ಜಿಲ್ಲಾ ಕೈಗಾರಿಕಾ […]Read More

ಅರ್ಜಿ ಆಹ್ವಾನ

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಮಂಗಳೂರು ನ 06:-   ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ನವೆಂಬರ್  30 ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದ.ಕ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ, ಮೌಲನಾ ಅಝಾದ್ ಭವನ, ಓಲ್ಡ್‍ಕೆಂಟ್‍ರಸ್ತೆ, ಪಾಂಡೇಶ್ವರ  ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್ ಆರ್‍ಸೆಟಿಯಲ್ಲಿ ಕೃತಕ ಆಭರಣ ತಯಾರಿಕೆ ಕುರಿತು ಉಚಿತ ತರಬೇತಿ

ಉಡುಪಿ, ನ ೦3: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI) ಮಣಿಪಾಲ ಇವರ ವತಿಯಿಂದ ನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ 18 ನವೆಂಬರ್ 2020 ರಿಂದ 13 ದಿನಗಳ “ಕೃತಕ ಆಭರಣಗಳ ತಯಾರಿಕೆ”ಉಚಿತ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಊಟ – ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು; ಸಂಬಂಧಿಸಿದ ಕ್ಷೇತ್ರದ ಬಗ್ಗೆ ವಿಸ್ತಾರವಾಗಿ ತಿಳಿಸುವುದರ ಜೊತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ […]Read More

error: Content is protected !!