ಉಡುಪಿ ನ.1: ಭಕ್ತರ ಅನುಕೂಲಕ್ಕಾಗಿ ನವೆಂಬರ್ 4ರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನದ ಸಮಯ ವಿಸ್ತರಿಸಲಾಗಿದೆ. ನವೆಂಬರ್ 4ರಿಂದ ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 10.00 ರವರೆಗೆ ಹಾಗೂ ಈ ಹಿಂದಿನಂತೆ ಮಧ್ಯಾಹ್ನದ ಸಮಯವನ್ನು 2.00 ರಿಂದ ಸಂಜೆ 5.00ರ ಬದಲು 6:00 ಗಂಟೆವರೆಗೆ ವಿಸ್ತರಿಸಿ, ಭಕ್ತಾದಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಶ್ರೀಕೃಷ್ಣನ ದರ್ಶನ ಲಭಿಸುವ ಅವಕಾಶವನ್ನು ಪರ್ಯಾಯ ಶ್ರೀಪಾದರು ಕಲ್ಪಿಸಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ. ಕೋವಿಡ್ 19, ಲಾಕ್ ಡೌನ್ ನಿಂದಾಗಿ ಉಡುಪಿ ಶ್ರೀಕೃಷ್ಣ […]Read More
ಉಡುಪಿ, ನ 1 : ಉಡುಪಿ ಜಿಲ್ಲಾಡಳಿತ ವತಿಯಿಂದ , 65 ನೇ ಕನ್ನಡ ರಾಜ್ಯೋತ್ಸವದಿನಾಚರಣೆಯನ್ನು ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಸಂದೇಶ ನೀಡಿದರು. ಜಿಲ್ಲಾ ಸಶತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ ಮತ್ತಿತರ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ಮತ್ತು 4 ಸಂಘ […]Read More
ಉಡುಪಿ, ಅ 01: ಕೊಂಡೆವೂರಿನ ಶ್ರಿಯೋಗಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಗಾಗಿ ತುಳಸಿಯನ್ನು ನೀಡಿ ದೇವರ ದರ್ಶನ ಪಡೆದುಕೊಂಡರು. ನಂತರ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಕೊಂಡೆವೂರಿನ ಶ್ರಿಯೋಗಾನಂದ ಸರಸ್ವತಿ ಸ್ವಾಮೀಜಿಯವರನ್ನು ಶ್ರೀಕೃಷ್ಣ ದೇವರ ಪ್ರಸಾದ ನೀಡಿ ಗೌರವಿಸಿದರು.Read More
ಉಡುಪಿ, ಅ 30: ಉಡುಪಿ ಜಿಲ್ಲಾಡಳಿತವು ನವೆಂಬರ್ 1 ರಂದು ೪೦ ಸಾಧಕರಿಗೆ (ವ್ಯಕ್ತಿ ಹಾಗೂ ಸಂಸ್ಥೆ) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ. ಸಾಧಕರ ಹೆಸರು ಮತ್ತು ವಿವರ:Read More
ಮಂಗಳೂರು, ಅ 30: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಂತಾರಾಷ್ಟ್ರೀಯ ತುಳು ವಿಚಾರ ಗೋಷ್ಠಿ ನವಂಬರ್ 1 ರಂದು 2.30ರಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನ್ಕಟ್ಟೆಯ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿವಿ ಸಂಧ್ಯಾ ಕಾಲೇಜು, ನಮ್ಮ ತುಳುನಾಡ್ ಟ್ರಸ್ಟ್ (ರಿ) ಮತ್ತು ತುಳುವರ್ಲ್ಡ್ (ರಿ) ಕುಡ್ಲ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ […]Read More
ಕಾರವಾರ ಅ 30: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ರಾಜ್ಯ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ (ಸಿಡಾಕ್), ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಕಾರವಾರ ಮತ್ತು ಅರುಣೋದಯ ತರಬೇತಿ ಕೇಂದ್ರ ಶಿರಸಿಯ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 7 ರಿಂದ 30 ದಿನಗಳ ವರೆಗೆ ಶಿರಸಿಯ ಅರುಣೋದಯ ತರಬೇತಿ ಕೇಂದ್ರದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕೆ ಕೌಶಲ್ಯ ಹಾಗೂ ಉದ್ಯಮಶೀಲತಾ ಅಭಿವೃದ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉದ್ಯಮಶೀಲತೆಯ ಮಹತ್ವ ಹಾಗೂ ಉದ್ಯಮಶೀಲರ ಸಾಮರ್ಥ್ಯಗಳು, ಉದ್ಯಮಶೀಲರಾಗುವುದಕ್ಕೆ ಪ್ರೇರಣಾತ್ಮಕ ಅಂಶಗಳು, ತಾಲೂಕಿನಲ್ಲಿ ಲಭ್ಯವಿರುವ […]Read More
ಚುನಾವಣೆ, ಬಂದೋ ಬಸ್ತ್, ಕೊರೊನಾ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಹತ್ತು ಹಲವು ಸಂದರ್ಭಗಳಲ್ಲಿ ಪೊಲೀಸರಂತೆ ಕಾರ್ಯನಿರ್ವಹಿಸುವ ಗೃಹಬರಕ್ಷಕ ಸಿಬ್ಬಂದಿಗಳ ಕಾರ್ಯವನ್ನು ಮೆಚ್ಚಿಕೊಳ್ಳಬೇಕು. ಆದರೆ ಸಮಯ, ಸಂದರ್ಭ ನೋಡದೆ ಕಷ್ಟದ ಸ್ಥಿತಿಯಲ್ಲಿಯೂ ಕೆಲಸ ಮಾಡುತ್ತಿರುವ ಗೃಹ ರಕ್ಷಕ ದಳ(ಹೋಮ್ ಗಾರ್ಡ್) ಹುದ್ದೆಯ ಹೆಸರನ್ನು ಪ್ಯಾರಾ ಪೊಲೀಸ್ ಫೋರ್ಸ್ (ಅರೆ ಆರಕ್ಷಕರ ಪಡೆ) ಎಂದು ಬದಲಾಯಿಸಬೇಕು ಎಂಬ ಆಗ್ರಹವನ್ನು ಮಾನ್ಯ ಗೃಹ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರ ಮುಂದಿಡುತ್ತೇನೆ. ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, […]Read More
ಉಡುಪಿ, ಅ 29 : ಕೋವಿಡ್19 ಗೆ ಲಸಿಕೆ ತಯಾರಿಕೆಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಮತ್ತು ಸಹಾಯಕ ಸಿಬ್ಬಂದಿಗಳಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ಮಾಹಿತಿಯ ಡೇಟಾಬೇಸ್ ನ್ನು ಶೀಘ್ರದಲ್ಲಿ ಸಿದ್ದಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , […]Read More
ಉಜಿರೆ ಅ 29: ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೀಮನ್ಸ್ 32 ಸ್ಲೈಸ್ ಸಿ.ಟಿ ಸ್ಕ್ಯಾನ್ ಉಪಕರಣ ಇಂದು ಲೋಕಾರ್ಪಣೆಗೊಂಡಿತು. “ಹಳ್ಳಿಯ ಜನತೆಗೆ ಅತ್ಯಾಧುನಿಕ ವೈದ್ಯಕೀಯ ಸೇವೆ ಸಿಗುವಂತಾಗಬೇಕೆಂಬ ವೀರೇಂದ್ರ ಹೆಗ್ಗಡೆಯವರ ಆಶಯ ಎಸ್.ಡಿ.ಎಂ ಆಸ್ಪತ್ರೆಯ ಮೂಲಕ ಈಡೇರುತ್ತಿದೆ. ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಉಪಕರಣ, ನುರಿತ ವೈದ್ಯವೃಂದ ಹಾಗೂ ಅನುಭವಿ ಸಿಬ್ಬಂದಿಗಳನ್ನು ಬಳಸಿಕೊಂಡು ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ.” ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಡಾ| ಎಲ್ […]Read More
