ಉಡುಪಿ, ನ 02:: ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತಂತೆಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ, ಕಾರ್ಕಳ ಮತ್ತು ಕುಂದಾಪುರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾಮಾನ್ಯ ಭತ್ತವನ್ನು ಕ್ವಿಂಟಾಲ್ ಗೆ ೧೮೬೮ ರೂ ದರದಲ್ಲಿ ಮತ್ತು ಗ್ರೇಡ್ […]Read More
ಮಣಿಪಾಲ್, ನ 02: ಟೆಸ್ಟ್ ಡ್ರೈವ್ ಗೆ ವಾಹನ ಪಡೆದ ವ್ಯಕ್ತಿ ವಾಹನದೊಂದಿಗೆ ಪರಾರಿಯಾದ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಟೋಬರ್ 31 ರಂದು ಮಧ್ಯಾಹ್ನ 2.50 ಕ್ಕೆ ಲಕ್ಷ್ಮೀಂದ್ರ ನಗರದಲ್ಲಿರುವ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಶಾಪ್ ಗೆ ವ್ಯಕ್ತಿಯೊಬ್ಬ ಬಂದು ತನ್ನನ್ನು ಗಣೇಶ್ ಉದ್ಯಾವರ ಎಂದು ಪರಿಚಯಿಸಿಕೊಂಡು ಹಳೆಯ ದ್ವಿಚಕ್ರ ವಾಹನ ಬೇಕೆಂದು ಅಲ್ಲೇ ಇದ್ದ ಟಿ ವಿ ಎಸ್ ವಿಕ್ಟರ್ ಬೈಕನ್ನು ಟೆಸ್ಟ್ ರೈಡ್ ಗೆ ಪಡೆದುಕೊಂಡರು. ಬೈಕ್ […]Read More
ಮಿತ್ತಬಾಗಿಲು ಗ್ರಾಮದ ಮನೆಮನೆಗೂ ತಲುಪುತ್ತಿದೆ ಈ ಮೂವರ ತಂಡ ಶ್ವೇತಾ ಎಸ್ ಬೆಳ್ತಂಗಡಿ , ನ 01: ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು, ಹಳ್ಳ ಕೊಳ್ಳಗಳನ್ನು ದಾಟಿ ಈ ಮೂರು ಮಂದಿಯ ತಂಡ ದನಕರುಗಳಿರುವ ಪ್ರತಿಯೊಂದು ಮನೆಗೆ ಭೇಟಿ ಕೊಡುತ್ತಿದೆ. ‘ಕಾಲು ಮತ್ತು ಬಾಯಿ ರೋಗ’ದ ವಿರುದ್ಧದ ಹೋರಾಟದಲ್ಲಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಿತ್ತಬಾಗಿಲು ಗ್ರಾಮದಲ್ಲಿ ಅವರಿಗೆ ಇದು ಸುಲಭದ ಕೆಲಸವಲ್ಲ. ವ್ಯಾಕ್ಸಿನೇಟರ್ ಮೋನಪ್ಪ, ಕುಸುಮಾ ಮತ್ತು ಶಾರದಾ ಅವರನ್ನೊಳಗೊಂಡ ಮೂರು ಮಂದಿಯ ತಂಡ ಈಗಾಗಲೇ ಗ್ರಾಮದ 100 […]Read More
ಕಾರವಾರ ನ 01: 65ನೇ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಲ್ಲಿ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಪರೇಡ್ ಮೈದಾನದಲ್ಲಿ ಆಚರಿಸಲಾಯಿತು. ಕಾರ್ಮಿಕ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. “ಕನ್ನಡ ನಾಡಿನ ಎಲ್ಲಾ ಸಂಸ್ಕೃತಿ ಮತ್ತು ಆಚರಣೆಗಳನ್ನು ಹೊಂದಿರುವ ಏಕೈಕ ಜಿಲ್ಲೆಯೆಂದರೆ ಅದು ಉತ್ತರ ಕನ್ನಡ ಜಿಲ್ಲೆಯಾಗಿದೆ. ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯನ್ನು ಹೊಂದಿರುವ ನಮ್ಮ ಜಿಲ್ಲೆ ಅಪಾರ […]Read More
ಉಡುಪಿ ನ.1: ಭಕ್ತರ ಅನುಕೂಲಕ್ಕಾಗಿ ನವೆಂಬರ್ 4ರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನದ ಸಮಯ ವಿಸ್ತರಿಸಲಾಗಿದೆ. ನವೆಂಬರ್ 4ರಿಂದ ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 10.00 ರವರೆಗೆ ಹಾಗೂ ಈ ಹಿಂದಿನಂತೆ ಮಧ್ಯಾಹ್ನದ ಸಮಯವನ್ನು 2.00 ರಿಂದ ಸಂಜೆ 5.00ರ ಬದಲು 6:00 ಗಂಟೆವರೆಗೆ ವಿಸ್ತರಿಸಿ, ಭಕ್ತಾದಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಶ್ರೀಕೃಷ್ಣನ ದರ್ಶನ ಲಭಿಸುವ ಅವಕಾಶವನ್ನು ಪರ್ಯಾಯ ಶ್ರೀಪಾದರು ಕಲ್ಪಿಸಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ. ಕೋವಿಡ್ 19, ಲಾಕ್ ಡೌನ್ ನಿಂದಾಗಿ ಉಡುಪಿ ಶ್ರೀಕೃಷ್ಣ […]Read More
ಉಡುಪಿ, ನ 1 : ಉಡುಪಿ ಜಿಲ್ಲಾಡಳಿತ ವತಿಯಿಂದ , 65 ನೇ ಕನ್ನಡ ರಾಜ್ಯೋತ್ಸವದಿನಾಚರಣೆಯನ್ನು ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಸಂದೇಶ ನೀಡಿದರು. ಜಿಲ್ಲಾ ಸಶತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ ಮತ್ತಿತರ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ಮತ್ತು 4 ಸಂಘ […]Read More
ಉಡುಪಿ, ಅ 01: ಕೊಂಡೆವೂರಿನ ಶ್ರಿಯೋಗಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಗಾಗಿ ತುಳಸಿಯನ್ನು ನೀಡಿ ದೇವರ ದರ್ಶನ ಪಡೆದುಕೊಂಡರು. ನಂತರ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಕೊಂಡೆವೂರಿನ ಶ್ರಿಯೋಗಾನಂದ ಸರಸ್ವತಿ ಸ್ವಾಮೀಜಿಯವರನ್ನು ಶ್ರೀಕೃಷ್ಣ ದೇವರ ಪ್ರಸಾದ ನೀಡಿ ಗೌರವಿಸಿದರು.Read More
ಉಡುಪಿ, ಅ 30: ಉಡುಪಿ ಜಿಲ್ಲಾಡಳಿತವು ನವೆಂಬರ್ 1 ರಂದು ೪೦ ಸಾಧಕರಿಗೆ (ವ್ಯಕ್ತಿ ಹಾಗೂ ಸಂಸ್ಥೆ) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ. ಸಾಧಕರ ಹೆಸರು ಮತ್ತು ವಿವರ:Read More