ಮಂಗಳೂರು ಡಿಸೆಂಬರ್ 4, 2020: ಕೊವೀಡ್-19 ಲಾಕ್ಡೌನ್ನಿಂದಾಗಿ ಕದ್ರಿ ಜಿಂಕೆ ಉದ್ಯಾವನದ ಲೇಸರ್ ಶೋ ಸಂಗೀತ ಕಾರಂಜಿ ವೀಕ್ಷಣೆಗೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಇದೀಗ ಡಿಸೆಂಬರ್ ತಿಂಗಳ ಶನಿವಾರ ಮತ್ತು ಭಾನುವಾರ ಮಾತ್ರ ಲೇಸರ್ ಶೋ ಸಂಗೀತ ಕಾರಂಜಿ ವೀಕ್ಷಣೆಗೆ ಸಾರ್ವಜನಿಕ ಪ್ರವೇಶಕ್ಕೆ ತಾತ್ಕಲಿಕವಾಗಿ ಅವಕಾಶವನ್ನು ಕಲ್ಪಿಸಲಾಗಿದೆ. ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More
ಉಡುಪಿ ಡಿ 03 2020: ಶೈಕ್ಷಣಿಕವಾಗಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟ ಜಿಲ್ಲೆಯಾಗಿದೆ. ಇಲ್ಲಿಗೆ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದಾರೆ. ಇವರಿಗೆ ಉಳಿದುಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿಗೆ ಮಹಿಳಾ ಹಾಸ್ಟೆಲ್ ಮಂಜೂರು ಮಾಡಿ ಎಂದು ಶಾಸಕ ರಘುಪತಿ ಭಟ್ ಅವರು ಗೃಹ ಸಚಿವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು. ಡಿಸೆಂಬರ್ 3 ರಂದು ಬಾಲಕಿಯರ […]Read More
ಉಡುಪಿ, ಡಿ 03, 2020: ಶ್ರೀ ಕೃಷ್ಣ ಮಠದಲ್ಲಿ,ಕನಕ ಜಯಂತಿಯ ಪ್ರಯುಕ್ತ ರಥಬೀದಿಯಲ್ಲಿರುವ ಕನಕಗುಡಿಯಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕನಕದಾಸರ ಪುತ್ಥಳಿಗೆ ಪೂಜೆ ಸಲ್ಲಿಸಿದರು. “ಕನಕದಾಸರು ಕೀರ್ತಿಯ ಕಡೆಗೆ ಮುಖಮಾಡದೆ ಯಶಸ್ಸನ್ನು ಗಳಿಸಿದರು. ನಾವೂ ಕೂಡ ಅವರ ಕೀರ್ತನೆಗಳ ಅರ್ಥವನ್ನು ಗ್ರಹಿಸಿ ಬದುಕಿನಲ್ಲಿ ಭಗವಂತನನ್ನು ಕಾಣಬೇಕು,” ಎಂದು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರೆಲ್ಲರಿಗೂ ಅನುಗ್ರಹಿಸಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಸಭೆಯಲ್ಲಿ ಆರ್.ಎಸ್.ಎಸ್ ನ ಜಿಲ್ಲಾ ಸಂಘಟಕರಾದ ನಾರಾಯಣ ಶೆಣೈ ಹಾಗೂ ಕನಕ ಸದ್ಭಾವನಾ […]Read More
ಉಡುಪಿ, ಡಿಸೆಂಬರ್ 03, 2020: ಉಡುಪಿ ಶ್ರೀ ಕೃಷ್ಣ ಮಠದ ಪ್ರವೇಶದ್ವಾರದಲ್ಲಿ ಕನ್ನಡ ನಾಮ ಫಲಕವನ್ನು ಅಳವಡಿಸಲಾಗಿದೆ. ಇತ್ತೀಚಿಗೆ ಕೃಷ್ಣ ಮಠದ ಪ್ರವೇಶ ದ್ವಾರದಲ್ಲಿ ಅಳವಡಿಸಲ್ಪಟ್ಟ ಫಲಕದಲ್ಲಿ ಕೇವಲ ಸಂಸ್ಕೃತ ಮತ್ತು ತುಳು ಭಾಷೆಯ ಲಿಪಿಯಲ್ಲಿ ಬರೆಯಲಾಗಿತ್ತು (ಹಳೆಯ ಫಲಕದಲ್ಲಿ ಕನ್ನಡ ಭಾಷೆ ಇತ್ತು).ಹೊಸ ಫಲಕದಲ್ಲಿ ಕನ್ನಡ ಬರಹ ಇಲ್ಲದ ಕಾರಣ ಕನ್ನಡಪರ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. “ಹಳೆಯ ಪ್ಲಾಸ್ಟಿಕ್ ಫಲಕ ತೆಗೆದು ಹೊಸ ಮರದ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ. ಸಂಸ್ಕೃತ ಹಾಗೂ ತುಳು […]Read More
ಮಂಗಳೂರು ಡಿ 03: ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 5762 ಗ್ರಾಮ ಪಂಚಾಯತ್ಗಳಿಗೆ 2 ಹಂತದಲ್ಲಿ ಚುನಾವಣೆಯನ್ನು ನಡೆಸಲು ಘೋಷಿಸಿರುತ್ತದೆ. ಅದರಂತೆ ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳೆ ರಕ್ಷಣೆಗೆ ಮತ್ತು ಆತ್ಮ ರಕ್ಷಣೆಗೆ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರ್ತ್ರಗಳನ್ನು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ನಮೂನೆ ನಂ 8 ರ ಪರವಾನಿಗೆ ಹೊಂದಿರುವ ಅಧಿಕೃತ […]Read More
ಮಂಗಳೂರು,ಡಿ 03 2020: ಬಲಿಷ್ಠ ಕನಸು- ಆಕಾಂಕ್ಷೆಗಳಿಂದ ಕೂಡಿದ ಪರಿಶ್ರಮಗಳ ಮೂಲಕ ಶ್ರೇಷ್ಠ ಉದ್ಯಮಿಗಳಾಗಲು ಸಾಧ್ಯ ಮತ್ತು ಸ್ವ ಉದ್ಯೋಗದ ಮೂಲಕವೇ ಆರ್ಥಿಕ ಸ್ವಾವಲಂಭಿಗಳಾಗಬಹುದು ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಸಂಕಲ್ಪ ಯೋಜನೆಯಡಿ ಆಯ್ದ ಜಿಲ್ಲೆಗಳಿದ್ದು ದಕ್ಷಿಣ ಕನ್ನಡದ ಸ್ವ ಉದ್ಯೋಗಾಕಾಂಕ್ಷಿಗಳು ತರಬೇತಿಯ ಸಂಪೂರ್ಣ ಸದುಪಯೋಗ ಪಡೆದು ಕ್ರಿಯಾಶೀಲ ಹಾಗೂ ಮಾದರಿ ಉದ್ಯಮಿಗಳಾಗಿ ಮೂಡಿ ಬರಬೇಕೆಂದು ಕರೆ ನೀಡಿದರು. ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ ಧಾರವಾಡ, […]Read More
ಮಂಗಳೂರು,ಡಿ 03 2020: ಪ್ರಸ್ತುತ ಸಾಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ-ಮೀನ್ಸ್ ವಿದ್ಯಾರ್ಥಿವೇತನಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕಛೇರಿ ಮೌಲನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ ಮಂಗಳೂರು ಕಛೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆRead More
ಉಡುಪಿ, ಡಿ 02: ಜಿಲ್ಲೆಯ ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾಕೇಂದ್ರದ ಆವರಣದಲ್ಲಿ ಪ್ರತಿ ಗುರುವಾರ ರೈತಸಂತೆ ನಡೆಯಲಿದ್ದು, ರೈತ ಸಂತೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ಹಾಗೂ ಇತರೆ ಯಾವುದೇ ರೈತ ಸಂಘ, ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಅರ್ಜಿಯನ್ನು ಡಿಸೆಂಬರ್ 21 ರ ಒಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಉಡುಪಿ, ದೂ.ಸಂ:0820-2522837, ಕುಂದಾಪುರ ದೂ. ಸಂ:08254-230813, ಕಾರ್ಕಳ ದೂ.ಸಂ: 08258-230288, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ ದೂ.ಸಂ: […]Read More
ಉಡುಪಿ, ಡಿ 02: ಉಡುಪಿ ನಗರಸಭಾ ವ್ಯಾಪ್ತಿಯ ಗುಂಡಿಬೈಲು ರಸಿಕ ಬಾರ್ನಿಂದ ದೊಡ್ಡಣಗುಡ್ಡೆ ಜುಮಾದಿಕಟ್ಟೆವರೆಗೆ ಮ್ಯಾನ್ಹೋಲ್ ಸೋರಿಕೆಯಾಗುತ್ತಿರುವುದರಿಂದ ದುರಸ್ಥಿ ಪಡಿಸಲು ಹಾಗೂ ಒಳಚರಂಡಿ ಪೈಪ್ಲೈನ್ ಬದಲಾವಣೆ ಮಾಡಲು ರಸ್ತೆ ಅಗೆಯಬೇಕಾಗಿರುವುದರಿಂದ, ಡಿಸೆಂಬರ್ 3 ರಿಂದ 2021 ಜನವರಿ 2 ರ ವರೆಗೆ ಒಂದು ತಿಂಗಳ ಕಾಲ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More
