ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ – ವಿವಿಧ ಸೇವೆಗಳು ಸೇವಾ ಸಿಂಧು ಜಾಲತಾಣದಲ್ಲಿ ಅರ್ಜಿ
ಮಂಗಳೂರು ಅ13:- ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಯಿಂದ ನೀಡಲಾಗುತ್ತಿರುವ ಒಟ್ಟು ಆರು ಸೇವೆಗಳಾದ ಮಾಜಿ ಸೈನಿಕರ ಹಾಗೂ ಮೃತ ಮಾಜಿ ಸೈನಿಕರ ಪತ್ನಿಗೆ ಗುರುತಿನ ಚೀಟಿ ವಿತರಿಸುವುದು, ಉದ್ಯೋಗ ನೋಂದಣಿ, ಸಿ.ಇ.ಟಿ ಪ್ರಮಾಣ ಪತ್ರ, ಕನ್ನಡಕ ಅನುದಾನ, ಮದುವೆ ಅನುದಾನ ಹಾಗೂ ಮನೆ ದುರಸ್ಥಿ ಅನುದಾನ (ಯುದ್ಧ ಸಂತ್ರಸ್ಥರ ಪ್ರಕರಣಗಳಿಗೆ) ಸೇವೆಗಳನ್ನು ಕರ್ನಾಟಕ ಸಕಾಲ ಸೇವೆಗಳ ಮುಖಾಂತರ ನೀಡಲು ಸರ್ಕಾರವು ತಿರ್ಮಾನಿಸಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಆನ್ಲೈನ್ ತಂತ್ರಾಂಶ ಸೇವಾ ಸಿಂಧು www.sakala.kar.nic.in ಜಾಲತಾಣದಿಂದ ಪಡೆಯಬಹುದು ಎಂದು ಜಂಟಿ ನಿರ್ದೇಶಕ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.