ಜು. 13ರಂದು ಪಂಡಿತ್ ವೆಂಕಟೇಶ್ ಕುಮಾರ್ ಅವರ ದಾಸವಾಣಿ
ಮಂಗಳೂರು, ಜು 07, 2023: ಸಾಸ್ತನದ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂಟಪದಲ್ಲಿ ದೇಶದ ಹೆಸರಾಂತ ಹಿಂದೂಸ್ಥಾನಿ ಗಾಯಕರಾದ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ಜುಲೈ 13ರ ಗುರುವಾರ ಸಂಜೆ 7ರಿಂದ ನಡೆಯಲಿದೆ.
ಭಕ್ತಾಭಿಮಾನಿಗಳಿಗೆ ಇದು ಉಚಿತ ಕಾರ್ಯಕ್ರಮವಾಗಿದ್ದು, ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಹಾರ್ಮೊನಿಯಂನಲ್ಲಿ ಪ್ರೊ. ನರೇಂದ್ರ ಎಲ್. ನಾಯಕ್, ತಬ್ಲಾದಲ್ಲಿ ಕೇಶವ ಜೋಶಿ ಹಾಗೂ ಶ್ರೀಧರ ಪ್ರಭು, ತಾಳದಲ್ಲಿ ಪ್ರತೀಕ್ಷಾ ಪ್ರಭು ಸಹಕರಸಲಿದ್ದಾರೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.