ಕುವೈಟ್ನಲ್ಲಿ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನ
ಮಂಗಳೂರು,ಜ. 07, 2023:
ಕುವೈಟ್ ದೇಶದಲ್ಲಿ ರೆಡಿಯಾಲಜಿ, ಜನರಲ್ ಸರ್ಜರಿ, ಪಿಡಿಯಾಟ್ರಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಿಗೆ ನುರಿತ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಕರ್ಷಕ ವೇತನ ಹಾಗೂ ಇತರೆ ಭತ್ಯೆಗಳಿಗೆ ಅವಕಾಶವಿದೆ, ಇದೇ ಜನವರಿ ಕೊನೆಯ ವಾರದಲ್ಲಿ ಸಂದರ್ಶನವಿದೆ.
ಹೆಚ್ಚಿನ ಮಾಹಿತಿಗೆ ವೆಬ್ಸೈಟ್:http://www.kaushalkar.com/doctor-registration-kuwait ಸಂಪರ್ಕಿಸಬಹುದು.
ಆಸಕ್ತರು ಕಚೇರಿ ದಿನಗಳಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, 2ನೇ ಮಹಡಿ, ಉರ್ವ ಮಾರುಕಟ್ಟೆ ಕಟ್ಟಡ, ಉರ್ವ ಮಾರುಕಟ್ಟೆ, ಅಶೋಕ ನಗರ, ಮಂಗಳೂರು ಇಲ್ಲಿ ಖುದ್ದಾಗಿ ಬಂದು ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರ ಮೊಬೈಲ್-9110248485 ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.