ಮಿಲಿಟರಿ – ಕುಟುಂಬ ಪಿಂಚಣಿಗಾಗಿ ಹೆಸರು ನೊಂದಾವಣೆ
ಮಂಗಳೂರು ಸೆ 14 : ಮಿಲಿಟರಿ ಕುಟುಂಬ ಪಿಂಚಣಿ ವಿಳಂಬವಾಗುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿವೆ. ಆದರೆ, ಮಾಜಿ ಸೈನಿಕರು ಜೀವಂತವಿರುವಾಗಲೇ ಪತ್ನಿ ಹಾಗೂ ದಿವ್ಯಾಂಗ ಮಕ್ಕಳ ಹೆಸರನ್ನು ಮಿಲಿಟಿರಿ ದಾಖಲಾತಿಯಲ್ಲಿ ನೊಂದಾಯಿಸದೇ ಇರುವುದು ಕಂಡು ಬಂದಿರುತ್ತದೆ.
ಈ ರೀತಿ ನೊಂದಾಯಿಸದಿದ್ದಲ್ಲಿ ಕುಟುಂಬ ಪಿಂಚಣಿ ಪಾವತಿ ವಿಳಂಬವಾಗುತ್ತಿದೆ. ಆದ್ದರಿಂದ ಈ ಪ್ರಕ್ರಿಯೆಯನ್ನು ಮಾಜಿ ಸೈನಿಕರು ಪೂರ್ತಿಗೊಳಿಸಿದಲ್ಲಿ ಅವರ ಕುಟುಂಬದವರು ಯಾವುದೇ ಅಡಚಣೆ ಇಲ್ಲದೇ ಕುಟುಂಬ ಪಿಂಚಣಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಂಟಿ ನಿರ್ದೇಶಕರು ಕಾರ್ಯಾಲಯ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.