ಮಂಗಳೂರು: ವಿದ್ಯುತ್ ವ್ಯತ್ಯಯ
ಮಂಗಳೂರು,ಏ.26, 2022: 33/11 ಕೆವಿ ನೆಹರೂಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಎಂ.ಪಿ.ಟಿ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾದ ಕಾರಣ ಏ.27ರ ಬೆಳಗ್ಗೆ 10 ರಿಂದ 5 ರವರೆಗೆ ಬಂದರ್ ಪೆÇಲೀಸ್ ಸ್ಟೇಷನ್, ಗಾಂಧಿ ಸನ್ಸ್, ನೂರ್ ಮೊಹಮ್ಮದ್, ಅಜೀಜುದ್ದೀನ್ ರಸ್ತೆ, ಜೆ.ಎಂ.ರಸ್ತೆ, ಛೇಂಬರ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಪಾಂಡೇಶ್ವರ:
33/11ಕೆವಿ ನೆಹರೂಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಪಾಂಡೇಶ್ವರ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಅದ್ದಂರಿಂದ ಏ.28ರ ಬೆಳಗ್ಗೆ 10 ರಿಂದ 5 ರವರೆಗೆ ಎ.ಬಿ ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಎಸ್.ಪಿ.ಆಫೀಸ್, ಪಾಂಡೇಶ್ವರ ಕಟ್ಟೆ, ಪಾಂಡೇಶ್ವರ ನ್ಯೂರಸ್ತೆ, ಮಹಾಲಿಂಗೇಶ್ವರ ಟೆಂಪಲ್, ಅಮೃತನಗರ, ರೋಸಾರಿಯೊ ಚರ್ಚ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.