ಗರ್ಭೀಣಿ ಮಹಿಳೆಯರು ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಿ: ಪ್ರಿಯಾಂಗಾ ಎಂ
ಕಾರವಾರ, ಡಿ 06, 2021: ಗರ್ಭೀಣಿ ಮಹಿಳೆಯರು ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಎಂ. ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಅಂಗನವಾಡಿ ಕಾರ್ಯಕರ್ತೆಯರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗರ್ಬೀಣಿ ಸ್ತ್ರೀಯರಿಗೆ ಸೀಮಂತ ಮಾಡುವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡದೇ ಅಂತಹ ಮಹಿಳೆರನ್ನು ಕರೆದು ಸಭೆ ನಡೆಸಿ ಅವರಿಗೆ ಪೋಷಣೆ ಹಾಗೂ ಹೆರಿಗೆ ಸಂಬಂಧಿಸಿದ ಮಾಹಿತಿ ನೀಡಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಿ ಎಂದು ಹೇಳಿದರು.
ತಾ.ಪಂ ಮತ್ತು ಜಿ.ಪಂ ವತಿಯಿಂದ ಇತರೆ ಇಲಾಖೆಗಳಿಗಿಂತ ಅಂಗನವಾಡಿಗಳಿಗೇ ಅತೀ ಹೆಚ್ಚಿನ ಆನುದಾನ ನೀಡಲಾಗಿದೆ. ಇದರ ವಿನಿಯೋಗ ಸರಿಯಾದ ಕ್ರಮದಲ್ಲಿ ಆಗಬೇಕು. ವಾರದಲ್ಲಿ 3 ದಿನ ಹೆಸರುಕಾಳು, ಗೋಧಿ, ಇತರ ಪೌಷ್ಟಿಕಾಂಶಯುಕ್ತ ಆಹಾರ ಧಾನ್ಯಗಳನ್ನು ನೀಡುವುದು. ಸೇವನೆ ಯೋಗ್ಯ ಪದಾರ್ಥಗಳನ್ನು ಮಾತ್ರ ಪೂರೈಸುವ ಕಾರ್ಯವಾಗಲಿ ಎಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಬಿಸಿನೀರಿನ ಬೇಡಿಕೆಯನ್ನು ಪರಿಸಿಲಿಸಲಾವುಗುವದು. ಕಾರ್ಯಕರ್ತರಿಗೆ ಒಟ್ಟು 28 ರಜೆಗಳು ಮಾತ್ರ ಇರುವುದು. ನಿರಂತರವಾಗಿ 4 ದಿನಗಳಿಗಿಂತ ಹೆಚ್ಚು ರಜೆ ಮಾಡುವಂತಿಲ್ಲ, ಕಾರ್ಯಕರ್ತರಿಗೆ ನೀಡಿದ ಮೊಬೈಲ್ ದುರಸ್ತಿಮಾಡಿಕೊಡುವ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಸಾಪ್ಟವೇರ್ ಗೆ ಸಂಬಂಧಿಸಿದ ರಿಪೇರಿ ಜವಾಬ್ದಾರಿ ವಾರಂಟಿ ಅವಧಿಯೊಳಗೆ ಇದೇ ಇಲಾಖೆ ಮಾಡಿಸಿಕೊಡುವುದು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಕಾರವಾರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋನಲ್ ಐಗಳ್ ಹಾಗೂ ವಿವಿಧ ಪ್ರದೇಶಗಳ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.