ಕೋವಿಡ್ ನಿಯಂತ್ರಣಕ್ಕೆ ವಿವಿಧ ತಂಡಗಳ ರಚನೆ: ಕೂರ್ಮಾರಾವ್

 ಕೋವಿಡ್ ನಿಯಂತ್ರಣಕ್ಕೆ ವಿವಿಧ ತಂಡಗಳ ರಚನೆ: ಕೂರ್ಮಾರಾವ್
Share this post

ಉಡುಪಿ, ಡಿ 06, 2021: ಜಿಲ್ಲೆಯಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷಣಾ ಕ್ರಮಗಳ ಅನುಷ್ಠಾನಕ್ಕಾಗಿ 12 ವಿವಿಧ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.   

ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಸಿಸಿಸಿ/ಡಿಸಿಎಚ್‌ಸಿ/ಡಿಸಿಎಚ್ ಗೆ ಸ್ಥಳಾಂತರ ಕೋವಿಡ್ ಆರೈಕೆ ಕೇಂದ್ರಗಳ(ಸಿಸಿಸಿ) ನಿರ್ವಹಣೆ, ಸಮರ್ಪಿತ ಕೋವಿಡ್ ಆರೋಗ್ಯ ಕೇಂದ್ರ ಮತ್ತು ಕೋವಿಡ್ ಆಸ್ಪತ್ರೆಗಳು, ಸಂಪರ್ಕ ಪತ್ತೆ ಹಚ್ಚುವಿಕೆ, ಪರೀಕ್ಷೆ, ಕಂಟೈನ್ಮೆಂಟ್ ವಲಯಗಳು, ಕ್ವಾರಂಟೈನ್ ನಿಗಾವಣೆ ಮತ್ತು ಸಿಕ್ಯೂಎಎಸ್ ಹಾಗೂ ಆರೋಗ್ಯ ಸೇತು, ಸಾಮಾಜಿಕ ಅಂತರ, ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಜ್ವರ ಚಿಕಿತ್ಸಾಲಯಗಳಿಂದ ಐಎಲ್‌ಐ/ಸಾರಿ ಪ್ರಕರಣಗಳ ವರದಿ ಪಡೆಯುವಿಕೆ, ಜಿಲ್ಲಾ ನಿಯಂತ್ರಣ ಕೊಠಡಿ, ಮೃತ ದೇಹದ ನಿರ್ವಹಣೆ, ತಾಯಿ ಮತ್ತು ಮಗುವಿನ  ಆರೋಗ್ಯ  ಸೇವಾ ಕಾರ್ಯಕ್ರಮ ನಿರ್ವಹಣೆಗಾಗಿ  ವಿವಿಧ  ಅಧಿಕಾರಿಗಳ  ನೇತೃತ್ವದಲ್ಲಿ  ತಂಡಗಳನ್ನು  ರಚಿಸಲಾಗಿದೆ. 

ಈ ಎಲ್ಲಾ ತಂಡಗಳು ಸಂಘಟಿತ ಹಾಗೂ ಸಮನ್ವಯದಿಂದ ತಮಗೆ ನಿರ್ವಹಿಸಿರುವ ಕಾರ್ಯವನ್ನು ಅನುಷ್ಠಾನಗೊಳಿಸುವಂತೆ ಹಾಗೂ ಪ್ರತಿದಿನದ ಕಾರ್ಯಪ್ರಗತಿಯ ವರದಿಯನ್ನು  ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

Subscribe to our newsletter!

Other related posts

error: Content is protected !!