ಅಡಿಕೆ ಹಳದಿ ರೋಗ ಪ್ಯಾಕೆಜ್: ಶೀಘ್ರ ಮಂಜೂರಾತಿ ನಿರೀಕ್ಷೆ
ಮಂಗಳೂರು ಅ.17, 2021: ಕರಾವಳಿ ಹಾಗೂ ಮಲೆನಾಡಿನ ಅಡಿಕೆ ತೋಟದಲ್ಲಿ ಕಂಡುಬಂದಿರುವ ಹಳದಿ ಎಲೆ ರೋಗಕ್ಕೆ 18 ಕೋಟಿ ರುಪಾಯಿಗಳ ಪ್ಯಾಕೆಜ್ ನೀಡುವಂತೆ ರಾಜ್ಯ ಸರಕಾರಕ್ಕೆ ತೋಟಗಾರಿಕಾ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಶೀಘ್ರ ಮಂಜೂರಾತಿ ನಿರೀಕ್ಷೆ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ತಿಳಿಸಿದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ನಡಿ ಪರಿಹಾರ ಕ್ರಮಕ್ಕೆ ನಿರ್ಧರಿಸಲಾಗಿದೆ. 3 ಸಾವಿರ ಎಕರೆಗಳಲ್ಲಿ ಹಳದಿ ಎಲೆ ರೋಗ ಅಧ್ಯಯನ ಹಾಗೂ ಪರ್ಯಾಯ ಬೆಳೆಗಳ ಬಗ್ಗೆ ಪ್ಯಾಕೆಜ್ನಲ್ಲಿ ಪ್ರಸ್ತಾಪಿಸಲಾಗಿದೆ. ರೋಗಬಾಧಿತ ಅಡಿಕೆ ಮರ ಕಡಿದು, ಬದಲಿ ಬೆಳೆಗಳನ್ನು ಬೆಳೆಸುವುದಕ್ಕೆ ಈ ಪ್ಯಾಕೆಜ್ ನೆರವಾಗಲಿದೆ. ಇದೇ ವೇಳೆ ಅಡಕೆ ತೋಟ ನಾಶವಾದ ಕಾರಣ ಪರಿಹಾರ ನೀಡುವಂತೆಯೂ ಬೆಳೆಗಾರರು ಆಗ್ರಹಿಸಿದ್ದಾರೆ. ಇದನ್ನೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.