ಶ್ರೀಕೃಷ್ಣ ಮಠ: ಪ್ರವಚನ ಮಾಲಿಕೆ ಉದ್ಘಾಟನೆ
ಉಡುಪಿ, ಜು 21, 2021: ಶ್ರೀಕೃಷ್ಣ ಮಠದಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಪ್ರವಚನ ಮಾಲಿಕೆಯ ಉದ್ಘಾಟನೆ ಇಂದು ನಡೆಯಿತು.
ವೇದವ್ಯಾಸರು ಕರುಣಿಸಿದ ಹದಿನೆಂಟು ಪುರಾಣಗಳಲ್ಲಿ ಭಗವಂತನ ಅವತಾರಗಳ ಪರಿಚಯ, ದೇವತಾ ಸಮೂಹಗಳ ವೈಶಿಷ್ಟ್ಯ, ಮುಂತಾದ ವ್ಯಾಸರ ಕೊಡುಗೆಗಳ ಪರಿಚಯದ ಪ್ರವಚನ ಕಾರ್ಯಕ್ರಮವನ್ನು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಪರ್ಯಾಯ ಶ್ರೀ ಅದಮಾರು ಹಿರಿಯ ಶ್ರೀಪಾದರು ಉದ್ಘಾಟನಾ ಸಂದೇಶವನ್ನು ನೀಡಿ ಅನುಗ್ರಹಿಸಿದರು. ಆರು ದಿನಗಳ ಪರ್ಯಂತ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ವಾಮನ ಪುರಾಣದ ಪ್ರವಚನವನ್ನು ನೀಡುವರು.