ಉತ್ತರ ಕನ್ನಡ: ಆದ್ಯತಾ ಗುಂಪುಗಳಿಗೆ ಮೇ 30 ರಿಂದ ಲಸಿಕೆ
ಕಾರವಾರ ಮೇ 29, 2021: ಸರಕಾರ ಗುರುತಿಸಿರುವ ವಿವಿಧ ಕ್ಷೇತ್ರಗಳ ಆದ್ಯತಾ ಗುಂಪುಗಳಿಗೆ ಮೇ 30 ರಿಂದ ಜೂನ್ 3 ರವರೆಗೆ ಜಿಲ್ಲೆಯಾದ್ಯಂತ ಕೋವಿಡ್-19 ಲಸಿಕೆ ವಿತರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರ್ಸಿಹೆಚ್ ಡಾ. ರಮೇಶ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಮೇ. 30: ಟೆಲಿಕಾಂ ಮತ್ತು ಇಂಟರ್ ನೆಟ್ ಸೇವಾದಾರರು, ಅಡ್ವೋಕೇಟ್ಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ
- ಮೇ. 31: ಬ್ಯಾಂಕ್ ಹಾಗೂ ಕೆಎಂಎಫ್ ಸಿಬ್ಬಂದಿಗೆ
- ಜೂನ್ 1: ರೈಲ್ವೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಹೋಟೆಲ್ ಮತ್ತು ಆತಿಥ್ಯ ಸೇವಾದಾರರು(ಪ್ರವಾಸಿ ಮಂದಿರ)
- ಜೂನ್ 2: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಗಾರ್ಮೆಂಟ್ ಕಾರ್ಖಾನೆಯ ಸಿಬ್ಬಂದಿ, ರಾಜ್ಯ ಮಹಿಳಾ ನಿಲಯ ವಾಸಿಗಳು
- ಜೂನ್ 3: ವಿಮಾ ಕಂಪನಿ, ಜೀವ ವಿಮಾ ನಿಗಮ, ನ್ಯೂ ಇಂಡಿಯಾ ಇನ್ಶುರೆನ್ಸ್, ಓರಿಯಂಟಲ್ ಇನ್ ಶ್ಯುರೇನ್ಸ್, ನ್ಯಾಷನಲ್ ಇನ್ಶೂರೆನ್ಸ್, ಯುನೈಟೆಡ್ ಇಂಡಿಯಾ, ಕರ್ನಾಟಕ ಸರ್ಕಾರ ವಿಮಾ ಇಲಾಖೆ, ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ತೋಟಗಾರಿಕೆಯ ಇಲಾಖೆ ಸಿಬ್ಬಂದಿ, ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಪಶು ಸಂಗೋಪನಾ ಮತ್ತು ಪಶು ವೈದ್ಯ ಇಲಾಖೆ ಸಿಬ್ಬಂದಿ.