ಕಲಾವಿದರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ

 ಕಲಾವಿದರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ
Share this post

ಮಂಗಳೂರು, ಮೇ 28, 2021: ಪ್ರಸ್ತುತ ರಾಜ್ಯಾದ್ಯಂತ ಕೋವಿಡ್-19 2ನೇ ಅಲೆಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ ರೂ.3,000/-ಗಳ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳು ಮೇ 19 ರಂದು ಘೋಷಿಸಿದ್ದಾರೆ.

ಆರ್ಥಿಕ ಸಂಕಷ್ಟಲ್ಲಿರುವ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ತಲಾ ರೂ.3,000/- ಗಳ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಲಾಗಿದೆ.

ಈ ಯೋಜನೆಯಡಿ ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಪ್ರಕಾರದ ಕಲಾವಿದರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕಲಾವಿದರು ವೃತ್ತಿ ನಿರತರಾಗಿದ್ದು, 35 ವರ್ಷ ಮೇಲ್ಪಟ್ಟವರಾಗಿರಬೇಕು ಹಾಗೂ ಕನಿಷ್ಟ 10 ವರ್ಷಗಳ ಕಲಾಸೇವೆ ಮಾಡಿರಬೇಕು. (ಕಲಾವಿದರು ಕಲಾಸೇವೆ ಮಾಡಿರುವ ಕನಿಷ್ಟ ಒಂದು ಪೋಟೋ ಲಗತ್ತಿಸುವುದು).

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಹಾಗೂ ಯಾವುದೇ ಸರ್ಕಾರಿ ನೌಕರರಾಗಿರಬಾರದು (ರಾಜ್ಯ/ ಕೇಂದ್ರ/ ನಿಗಮ ಮಂಡಳಿ/ ಸರ್ಕಾರಿ ಅನುದಾನಿತ ಸಂಸ್ಥೆಗಳು/ ಅರೆ ಸರ್ಕಾರಿ ಸಂಸ್ಥೆಗಳು). 2020-21ನೇ ಸಾಲಿನ ಸಾಮಾನ್ಯ /ವಿಶೇಷ ಘಟಕ/ ಗಿರಿಜನ ಉಪಯೋಜನೆಯಡಿ ಸಾಂಸ್ಕೃತಿಕ ಸಂಘಸಂಸ್ಥೆಗಳ ಚಟುವಟಿಕೆಗಳಿಗೆ ಧನಸಹಾಯ ಪಡೆದವರು / ವಾದ್ಯ ಪರಿಕರ/ ವೇಷಭೂಷಣ ಖರೀದಿ/ ಶಿಲ್ಪಕಲೆ/ ಚಿತ್ರಕಲಾ ಪ್ರದರ್ಶನಕ್ಕೆ ಧನಸಹಾಯ ಪಡೆದವರು ಸದರಿ ಯೋಜನೆಯಡಿ ಅರ್ಜಿ ಸಲ್ಲಿಸುವಂತಿಲ್ಲ.

ಈ ವ್ಯಾಪ್ತಿಗೆ ಒಳಪಡುವ ಕಲಾವಿದರು ತಮ್ಮ ಹೆಸರು, ವಿಳಾಸ, ಕಲಾಪ್ರಕಾರ, ಆಧಾರ್ ಸಂಖ್ಯೆ (ಆಧಾರ್ ಕಾರ್ಡ್ ಲಗತ್ತಿಸಿ), ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ (ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟ ಲಗತ್ತಿಸಿ) ವಿವರಗಳನ್ನೊಳಗೊಂಡ ಅರ್ಜಿಯನ್ನು ಜಿಲ್ಲೆಯಲ್ಲಿರುವ ಎಲ್ಲಾ ನಾಗರೀಕ ಸೇವಾ ಕೇಂದ್ರಗಳು ಅಥವಾ ಕಂಪ್ಯೂಟರ್ / ಮೊಬೈಲ್ ಮೂಲಕ ಆನ್ ಲೈನ್ನಲ್ಲಿ ಸೇವಾಸಿಂಧು ಪೋರ್ಟ್‍ಲ್ ನಲ್ಲಿಯೇ ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸುವುದು.

ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ ಜೂನ್ 5 ಕೊನೆಯ ದಿನ.

ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ: 8861632030/7411345334 ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳುಭವನ ಊರ್ವಸ್ಟೋರ್, ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!