ಮಂಗಳೂರು: ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು
ಮಂಗಳೂರು, ಮೇ 26, 2021: ಪ್ರಸ್ತುತ ಸಾಲಿನ ಮುಂಗಾರು ಹಂಗಾಮು ಆರಂಭಗೊಂಡಿದ್ದು, ಭತ್ತದ ಸಸಿ ಮಡಿ ಕಾರ್ಯಕ್ಕೆ ಸೂಕ್ತವಾದ ಸಮಯವಾಗಿದ್ದು, ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಇರಿಸಲಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ರೈತ ಸಂಪರ್ಕ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಸಹ ಸಮರ್ಪಕವಾಗಿರುತ್ತದೆ.
ಬಿತ್ತನೆ ಬೀಜ ಮತ್ತು ರಸಗೊಬ್ಬರದ ದರಪಟ್ಟಿ ವಿವರ ಇಂತಿವೆ:
ಕಂಪೆನಿವಾರು ರಸಗೊಬ್ಬರ ದರಪಟ್ಟಿ (ರೂ/ಬ್ಯಾಗ್) ಗರಿಷ್ಠ ಮಾರಾಟ ದರ:
ರಸಗೊಬ್ಬರ 20:20:0:13- (ಕಂಪನಿ ಹೆಸರು) IFFCO -975 ರೂ, IPಐ -1050 ರೂ, IPL-1050 ರೂ, KRIBHCO-1090-ರೂ,CIL-1050 ರೂ, STL-1150 ರೂ, MCF-1090 ರೂ, PPCL-1090 ರೂ.
ರಸಗೊಬ್ಬರ 10:26:26-(ಕಂಪನಿ ಹೆಸರು) IIFFCO-1175 ರೂ, KRIBHCO-1300 ರೂ, ZACL-1375 ರೂ, CIL-1300 ರೂ, STL-1390 ರೂ, MCF-1375 ರೂ, PPCL-1375 ರೂ.
ರಸಗೊಬ್ಬರ 12:32:16-(ಕಂಪನಿ ಹೆಸರು) IFFCO -1185 ರೂ, KRIBHCO-1310 ರೂ, STL-1370 -ರೂ, MCF-1310 ರೂ, PPCL-1310 ರೂ.
ರಸಗೊಬ್ಬರ ಡಿ.ಎ.ಪಿ-(ಕಂಪನಿ ಹೆಸರು) IIFFCO 1200 ರೂ, IPಐ -1200 ರೂ, IPL -1200 ರೂ, KRIBHCO-1200-ರೂ, ZACL-1200ರೂ, CIL-1200 ರೂ, STL-1200 ರೂ, MCF-1200 ರೂಪಾಯಿ ನಿಗಧಿಸಲಾಗಿದೆ.
• ರಸಗೊಬ್ಬರ ಚೀಲದ ಮೇಲಿನ ದರಗಳನ್ನು ಪರಿಗಣಿಸದೆ ಸರ್ಕಾರದ ನಿರ್ದೇಶನದಂತೆ ಈ ಮೇಲಿನ ದರಗಳಲ್ಲಿಯೇ ಕಡ್ಡಾಯವಾಗಿ ಮಾರಾಟ ಮಾಡಲು ಸೂಚಿಸಿದೆ.
ತಳಿವಾರು ಭತ್ತದ ಬಿತ್ತನೆ ಬೀಜ ಸಹಾಯಧನ/ರೈತರ ವಂತಿಕೆ ವಿವರ (ರೂ.ಗಳಲ್ಲಿ)
MO4- ಪ್ರತಿ 25 ಕೆ.ಜಿ ಬ್ಯಾಗ್ಗೆ 775 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 575 ರೂ.
ಜಯ- ಪ್ರತಿ 25 ಕೆ.ಜಿ ಬ್ಯಾಗ್ಗೆ 750 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 550 ರೂ.
ಜ್ಯೋತಿ- ಪ್ರತಿ 25 ಕೆ.ಜಿ ಬ್ಯಾಗ್ಗೆ 825 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 625 ರೂ.
ಉಮಾ- ಪ್ರತಿ 25 ಕೆ.ಜಿ ಬ್ಯಾಗ್ಗೆ 800 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 600 ರೂಪಾಯಿ ನಿಗದಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.