ದ.ಕ: ಕೋವಿಡ್ ಲಸಿಕೆ ಪ್ರಾರಂಭ
ಮಂಗಳೂರು, ಮೇ 10, 2021: ಮೇ 11 ರಿಂದ 18 ವರ್ಷದಿಂದ 44 ವರ್ಷದೊಳಗಿನ ಫಲಾನುಭವಿಗಳಿಗೆ ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಆಸ್ಪತ್ರೆಗಳಲ್ಲಿ ನೀಡಲಾಗುವುದು.
ಈಗಾಗಲೇ ಈ ವಯೋಮಾನದವರು ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿದವರಿಗೆ ಮಾತ್ರ ಲಸಿಕೆ ನೀಡಲಾಗುವುದು.ಆನ್ ಸ್ಪಾಟ್ ರಿಜಿಸ್ಟ್ರೇಷನ್ ಅಥವಾ ವ್ಯಾಕ್ಸಿನೇಷನ್ ಇರುವುದಿಲ್ಲ.
ಪ್ರತಿದಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 250 ರಂತೆ, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 170 ರಂತೆ 7 ದಿನಗಳ ಕಾಲ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ.
18 ವರ್ಷ ಮೇಲ್ಪಟ್ಟವರು ಅಪಾಯಿಂಟ್‌ಮೆಂಟ್ ಷೆಡ್ಯೂಲ್ ನಂತರ ಬರುವ SMS ಸಂದೇಶವನ್ನು (4 Digit) ಖಚಿತಪಡಿಸಿದ ನಂತರವೇ ಲಸಿಕಾ ಶಿಬಿರಕ್ಕೆ ಹೋಗಬೇಕಾಗಿದೆ.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳು ಕೋವಿಶಿಲ್ಡ್ 2ನೇ ಡೋಸ್ ಲಸಿಕೆಯನ್ನು ಮಾತ್ರ ಪಡೆಯಬಹುದಾಗಿದೆ.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 100 ಡೋಸ್ ಲಸಿಕೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200 ಡೋಸ್ ಲಸಿಕೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 200 ಡೋಸ್ ಲಸಿಕೆಯನ್ನು ಲಸಿಕೆಯ ಲಭ್ಯತೆಗೆ ಅನುಗುಣವಾಗಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.