ಉದ್ಯೋಗ ಖಾತರಿಯಲ್ಲಿ ಕೂಲಿ ಹೆಚ್ಚಳ: ಪ್ರಿಯಾಂಗಾ ಎಮ್
ಕಾರವಾರ ಏಪ್ರಿಲ್ 3, 2021: ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಏಪ್ರಿಲ್ 1 ರಿಂದ ಕೂಲಿ ಹೆಚ್ಚಳ ಮಾಡಲಾಗಿದ್ದು, ಗ್ರಾಮೀಣ ಭಾಗದ ಜನರಿಗೆ ನಿರಂತರ ಉದ್ಯೋಗ ಒದಗಿಸಲಾಗುತ್ತಿದೆ ಎಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಅಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕೂಲಿ ಮೊತ್ತ 275 ರೂ. ಮತ್ತು ಸಲಕರಣೆ ವೆಚ್ಚ 10 ರೂ ಇದ್ದು ಒಟ್ಟಾರೆಯಾಗಿ 285 ರೂ ಸಂದಾಯ ಮಾಡಲಾಗುತ್ತಿತ್ತು. ಪ್ರಸ್ತುತ ಆರ್ಥಿಕ ವರ್ಷದಿಂದ ಸರ್ಕಾರದ ಆದೇಶದಂತೆ ಕೂಲಿ ಮೊತ್ತ 289 ರೂ. ಮತ್ತು ಸಲಕರಣೆ ವೆಚ್ಚ 10 ರೂ. ಒಟ್ಟಾರೆಯಾಗಿ 299 ರೂ ಸಂದಾಯ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ಕೂಲಿ ಮೊತ್ತವು ನಿಗದಿತ ಸಮಯದಲ್ಲಿ ನೇರವಾಗಿ ಅವರವರ ಖಾತೆಗೆ ಜಮಾವಾಗುತ್ತದೆ. ಮಹಿಳೆಯರು ಇದರ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು. ಅಲ್ಲದೇ “ದುಡಿಯೋಣ ಬಾ” ಅಭಿಯಾನವು ಚಾಲ್ತಿಯಲ್ಲಿದ್ದು, ಗ್ರಾಮೀಣ ಭಾಗದ ಜನರು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚಿನ ಕೂಲಿಯನ್ನು ಪಡೆಯುವುದು ಮತ್ತು ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸಿ ಸ್ವಾವಲಂಭಿಯಾಗಿ ಬದುಕಬೇಕಾಗಿದೆ ಎಂದು ಅವರು ಹೇಳಿದ್ದಾರೆ.