ಕುಲಪತಿ ಹುದ್ದೆಗೆ ಲಾಬಿ: ಷಡ್ಯಂತ್ರ ಬಯಲುಗೊಳಿಸಲು ಎಸ್‌ಡಿಪಿಐ ಆಗ್ರಹ

 ಕುಲಪತಿ ಹುದ್ದೆಗೆ ಲಾಬಿ: ಷಡ್ಯಂತ್ರ ಬಯಲುಗೊಳಿಸಲು ಎಸ್‌ಡಿಪಿಐ ಆಗ್ರಹ
Share this post

ಮಂಗಳೂರು, ಮಾ31, 2021: ಕುಲಪತಿ ಹುದ್ದೆ ಒದಗಿಸಿಕೊಡುವುದಾಗಿ ನಂಬಿಸಿ ₹ 17.50 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಬಂಧಿಸಿದ ಪೊಲೀಸರನ್ನು ಶ್ಲಾಘಿಸಿರುವ ಎಸ್‌ಡಿಪಿಐ, ಈ ಪ್ರಕರಣದ ಹಿಂದಿರುವ ಷಡ್ಯಂತ್ರವನ್ನು ಬಯಲುಗೊಳಿಸಲು ಆಗ್ರಹಿಸಿದೆ.

ಪ್ರಸ್ತುತ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತ ಇದೆ. ಎಲ್ಲಾ ಕಡೆಯು ಭ್ರಷ್ಟಾಚಾರ, ಲಾಬಿ,ವಂಚನೆ ನಡೆಯುತ್ತಲೇ ಇದೆ. ದ.ಕ ಜಿಲ್ಲೆಯಲ್ಲಿ ಕೂಡ ಅಧಿಕಾರಿಗಳನ್ನು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡುವುದು, ಉನ್ನತ ಹುದ್ದೆಗೆ ಪ್ರೊಮೋಷನ್ ಕೊಡಿಸುವಂತಹ ದೊಡ್ಡ ಲಾಬಿಯೆ ಇದರ ಹಿಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಎಸ್‌ಡಿಪಿಐ ದ.ಕ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಲಪತಿ ಹುದ್ದೆಗೆ ನೇಮಕ ಮಾಡುವುದಾಗಿ ಹೇಳಿ ರಾಮಸೇನೆಯ ಸಂಸ್ಥಾಪಕ ಲಕ್ಷ ಗಟ್ಟಲೆ ವಂಚಿಸಿರುವುದೆ ಇದಕ್ಕೆ ಬಹು ದೊಡ್ಡ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಯಾರೆಲ್ಲ ಬಾಗಿಯಾಗಿದ್ದಾರೆ,ಇದರಲ್ಲಿ ಸಂಸದರ,ಶಾಸಕರ ಮತ್ತು ಹಿಂದುತ್ವ ನಾಯಕರ ಪಾಲೆಷ್ಟು ಎಂಬುದನ್ನು ತನಿಖೆಗೆ ಒಳಪಡಿಸಿ ವಂಚನೆ ಜಾಲದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕು. ಹಾಗೆಯೇ ಅವರ ಮೇಲೆ ವಂಚನೆಯ ದೂರು ದಾಖಲಾಗಬೇಕೆಂದು ಅನ್ವರ್ ಸಾದಾತ್ ಬಜತ್ತೂರು ಹೇಳಿದ್ದಾರೆ.

Subscribe to our newsletter!

Other related posts

error: Content is protected !!