ಸಿಲ್ ಪಾಲಿನ್ ಶೀಟ್ ಖರೀದಿಗೆ ಸಹಾಯಧನ
ಉಡುಪಿ, ಫೆಬ್ರವರಿ 26, 2021: ಸರಕಾರದ ಉಪಯೋಜನೆಯಡಿ ಅಡಿಕೆ ಹಾಗೂ ಇತರೆ ತೋಟಗಾರಿಕೆ ಉತ್ಪನ್ನಗಳನ್ನು ಒಣಗಿಸಲು ಖರೀದಿಸಿರುವ ವಿವಿಧ ಅಳತೆಯ ಸಿಲ್ ಪಾಲಿನ್ ಶೀಟ್ಗಳ ಒಟ್ಟು ವೆಚ್ಚದ ಶೇ. 40 ರಂತೆ ಪ್ರತಿ ಚ. ಮೀ. ಗೆ 20 ರೂ. ಸಹಾಯಧನ ಲಭ್ಯವಿರುತ್ತದೆ.
ಸಿಲ್ ಪಾಲಿನ್ ಶೀಟ್ಗಳನ್ನು 2020, ಏಪ್ರಿಲ್ 1 ರ ನಂತರ ಖರೀದಿಸಿರುವ ರೈತರು ಸಿಲ್ ಪಾಲಿನ್ ಶೀಟ್ ಖರೀದಿಸಿರುವ ಬಗ್ಗೆ ಮೂಲ ಬಿಲ್, ಪಹಣಿ, ಆಧಾರ್ ಪ್ರತಿ, ಚಾಲ್ತಿ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಪ್ರತಿಯೊಂದಿಗೆ ಸಂಬಂಧಿಸಿದ ತಾಲೂಕು ತೋಟಗಾರಿಕೆ ಇಲಾಖಾ ಕಛೇರಿಯಲ್ಲಿ ಮಾರ್ಚ್ 8 ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ
- ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.), ಉಡುಪಿ ದೂ. ಸಂಖ್ಯೆ: 0820-2531950,
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ ದೂ. ಸಂಖ್ಯೆ: 0820-2522837,
- ಕುಂದಾಪುರ ದೂ.ಸಂಖ್ಯೆ: 08254-230813,
- ಕಾರ್ಕಳ ದೂ. ಸಂಖ್ಯೆ: 08258-230288
ಅನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.