ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸಹಾಯಧನ
ಉಡುಪಿ, ಫೆಬ್ರವರಿ 11, 2021: ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಕೃಷಿ ಮೂಲಭೂತ
ಸೌಕರ್ಯಗಳನ್ನು ಸೃಷ್ಟಿಸುವುದು ಅಗತ್ಯವಾಗಿದ್ದು, ಕೇಂದ್ರ ಪುರಸ್ಕೃತ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಕೊಯ್ಲೋತ್ತರ ನಿರ್ವಹಣೆಗಾಗಿ ಮೂಲಭೂತ ಸೌಕರ್ಯ ಹಾಗೂ ಸಾಮೂಹಿಕ ಕೃಷಿ ಆಸ್ತಿಯನ್ನು ಸೃಷ್ಟಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಾಯಧನದ ಅವಕಾಶ ಕಲ್ಪಿಸಲಾಗಿದೆ.
ಕೊಯ್ಲೋತ್ತರ ನಿರ್ವಹಣೆಗಾಗಿ ಮದ್ಯಮಾವಧಿ ಹಾಗೂ ಧೀರ್ಘಾವಧಿ ಸಾಲದ ಮೇಲಿನ ವಾರ್ಷಿಕ ಶೇ.9 ರ ಬಡ್ಡಿಗೆ ಶೇ.3 ರ ಬಡ್ಡಿ ಸಹಾಯಧನವನ್ನು ಗರಿಷ್ಟ 2 ಕೋಟಿ ರೂ. ವರೆಗೂ ನೀಡಲಾಗುವುದು, 2 ಕೋಟಿ ರೂ. ವರೆಗೆ ಪಡೆಯುವ ಸಾಲಕ್ಕೆ ಖಾತರಿ ವೆಚ್ಚವನ್ನು ಸರ್ಕಾರದಿಂದ ಒದಗಿಸಲಾಗುವುದು ಹಾಗೂ 2020 ಜುಲೈ 8 ರ ನಂತರ ಸಾಲ ಪಡೆದ ಘಟಕಗಳಿಗೆ ಬಡ್ಡಿ ಸಹಾಯಧನವನ್ನು ನೀಡಲು ಅವಕಾಶ ಕಲ್ಪಿಸಲಾಗುವುದು.
ಫಲಾನುಭವಿಯು, ಪ್ರಸ್ತಾವನೆಯನ್ನು ಸಾಲ ಪಡೆಯುವ ಹಣಕಾಸು ಸಂಸ್ಥೆಯೊಂದಿಗೆ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯ ವೆಬ್ಸೈಟ್ www.agriinfra.dac.gov.in ನಲ್ಲಿ ನೊಂದಣಿ ಮಾಡಿ ಸಹಾಯಧನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ದೂರವಾಣಿ ಸಂಖ್ಯೆ: 0820-2531950 ಹಾಗೂ ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಉಡುಪಿ ದೂರವಾಣಿ ಸಂಖ್ಯೆ: 0820-2522837, ಕುಂದಾಪುರ ದೂರವಾಣಿ ಸಂಖ್ಯೆ: 08254-230813, ಕಾರ್ಕಳ ದೂರವಾಣಿ ಸಂಖ್ಯೆ: 08258-230288 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.