ಉಡುಪಿ, ಜನವರಿ 22, 2021: ಉಡುಪಿಯಲ್ಲಿ ಇಂದು ಶ್ರೀ ಮಧ್ವನವಮಿ ಆಚರಿಸಲಾಯಿತು.
ಶ್ರೀ ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಪರ್ಯಾಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀ ಮಧ್ವಾಚಾರ್ಯರು ಅದೃಶ್ಯರಾಗಿ ಇರುವ ಸ್ಥಳದಲ್ಲಿ ಪೂಜೆ ಸಲ್ಲಿಸಿ ಅರ್ಘ್ಯ,ಪಾದ್ಯವನ್ನಿತ್ತರು.
ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದ ಸಂದರ್ಭದಲ್ಲಿ,ವಿದ್ವಾನ್ ರಾಮನಾಥಾಚಾರ್ಯರು,’ಆಚಾರ್ಯ ಮಧ್ವರು ತಮ್ಮ ಕೃತಿಗಳಲ್ಲಿ ಎತ್ತಿ ತೋರಿದ ತತ್ವಗಳ ಪ್ರಸ್ತುತತೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿರು.
ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದ ಸಂದರ್ಭದಲ್ಲಿ,ಡಾ.ರಮೇಶ್ ವಾಸುದೇವ ಗಮಕಿ ಇವರು ‘ತತ್ವಜ್ಞಾನ ಮತ್ತು ವಿಜ್ಞಾನದ’ ಕುರಿತು ಉಪನ್ಯಾಸ ನೀಡಿರು.
ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದ ಸಂದರ್ಭದಲ್ಲಿ,ಸುಜಯ ಹರ್ತಿ ಮತ್ತು ತಂಡದವರಿಂದ ‘ಕನ್ನಡ ದ್ವಾದಶ ಸ್ತೋತ್ರ ಗಾಯನ ನಡೆಯಿತು.
ಶ್ರೀಕೃಷ್ಣಮಠದಲ್ಲಿ,ಮಧ್ವನವಮಿಯ ಪ್ರಯುಕ್ತ ಪಲ್ಲಪೂಜೆಯನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ನೆರವೇರಿಸಿದರು.