ಮಂಗಳೂರಿನಿಂದ ಕುಮಟಾ ಗೆ ವೋಲ್ವೋ ಬಸ್ ಪ್ರಾರಂಭ
ಮಂಗಳೂರು ಜನವರಿ 6 2021: ಕೋವಿಡ್-19 ಲಾಕ್ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಮಂಗಳೂರಿನಿಂದ ಕುಮಟಾ ಮಾರ್ಗದಲ್ಲಿ ವೋಲ್ವೋ ವಾಹನವನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಜನವರಿ 4 ರಿಂದ ಪುನಃ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗಿದೆ.
ಸಾರ್ವಜನಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗೆ ಭೇಟಿ ನೀಡುವವರು ಬೇಡಿಕೆಗನುಗುಣವಾಗಿ ವೋಲ್ವೋ ಬಸ್ ಸ್ಟೇಟ್ಬ್ಯಾಂಕ್ ನಿಂದ ಸಂಜೆ 5 ಗಂಟೆಗೆ ಹೊರಟು ಕುಮಟಗೆ ರಾತ್ರಿ 9.30ಕ್ಕೆ ತಲುಪಲಿದೆ.(ಉಡುಪಿ,ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ), ಕುಮಟದಿಂದ ಮಂಜಾನೆ 5.30ಕ್ಕೆ ಹೊರಟು ಬೆಳಿಗ್ಗೆ 9.30ಕ್ಕೆ ಮಂಗಳೂರಿಗೆ ತಲುಪಲಿದೆ.
ಈ ಸಾರಿಗೆ ಸೌಲಭ್ಯವನ್ನು ಜನವರಿ 4 ರಿಂದ ಪ್ರಾರಂಭಿಸಲಾಗಿದೆ.
ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್ಒಪಿ (Standard operating procedure) ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಮಂಗಳೂರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.