ಕಾರ್ಕಳ: ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ

 ಕಾರ್ಕಳ: ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ
Share this post

ಉಡುಪಿ, ನ 20:  ಉಡುಪಿ ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕಾರ್ಕಳ ತಾಲೂಕಿನ ಕುಕ್ಕುಂದೂರು ವ್ಯಾಪ್ತಿಯ ಪ್ರದೇಶಗಳಲ್ಲಿ  ತಂಬಾಕು ಮಾರಾಟದ ಅಂಗಡಿ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ 24 ಪ್ರಕರಣ ದಾಖಲಿಸಿ ರೂ. 4100 ದಂಡ ವಸೂಲಿ ಮಾಡಲಾಯಿತು.

ದಾಳಿಯಲ್ಲಿ ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ವಾಸುದೇವ್, ಕಾರ್ಕಳ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ಕಾರ್ಕಳದ ಹಿರಿಯ ಆರೋಗ್ಯ ಸಹಾಯಕ ಶಿವರಾಮ್ ಭಟ್, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಕಾರ್ಕಳ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಸಿದ್ದಪ್ಪ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಎನ್.ಟಿ.ಸಿ.ಪಿ ಜಿಲ್ಲಾ ಸಲಹೆಗಾರರಾದ ಮಂಜುಳಾ ಶೆಟ್ಟಿ, ಸಮಾಜಕಾರ್ಯಕರ್ತೆ ಶೈಲಾ ಶಾಮನೂರು, ಕಾರ್ಕಳ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್  ಮಧು, ಪೋಲೀಸ್ ಠಾಣೆಯ ಆರಕ್ಷಕರಾದ ದಿನಕರ್ ಎಸ್ ಐ, ಸಂಜಯ್, ದಿನೇಶ್ ಪ್ರಭು ಮತ್ತಿತರರು  ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!