ಹೊಸ ವರ್ಷಾಚರಣೆಯ ಪ್ರಯುಕ್ತ ಮುಂಜಾಗ್ರತಾ ಕ್ರಮಗಳು.

 ಹೊಸ ವರ್ಷಾಚರಣೆಯ ಪ್ರಯುಕ್ತ ಮುಂಜಾಗ್ರತಾ ಕ್ರಮಗಳು.
Share this post

ಕಾರವಾರ, ಡಿ.30, 2024: ಡಿಸೆಂಬರ್ 31 ರಂದು ನಡೆಯುವ ಹೊಸ ವರ್ಷದ ಸಂಭ್ರಮಾಚರಣೆ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಮುಂದಿನ0ತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷಿಪ್ರಿಯಾ ತಿಳಿಸಿದ್ದಾರೆ.

ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಭರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೋಟಾರ್ ಸೈಕಲ್ ವೀಲಿಂಗ್ ನಡೆಸುವುದನ್ನು ಕಡ್ಡಾಯವಾಗಿ ನಡೆಸತಕ್ಕದ್ದಲ್ಲ. ಸಾರ್ವಜನಿಕರು ವಾಹನಗಳ ನಿಲುಗಡೆಗೆ ಈಗಾಗಲೇ ನಿಗಧಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿಯೇ ಶಿಸ್ತುಭದ್ದವಾಗಿ ನಿಲ್ಲಿಸತಕ್ಕದ್ದು. ಮಧ್ಯಪಾನ ಸೇವಿಸಿ ಮೈಮರೆತು ಸಮುದ್ರ ನೀರಿಗೆ, ಜಲಪಾತ ಹಾಗೂ ನದಿಗಳ ನೀರಿನಲ್ಲಿ ಈಜತಕ್ಕದ್ದಲ್ಲ. ಹೊಸ ವರ್ಷದ ಸಂಭ್ರಮಾಚರಣೆಯ ಭರದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡಿದ್ದು ಕಂಡುಬAದಲ್ಲಿ ಅಂಥಹವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು. ಸಂಜೆ 6 ಗಂಟೆಯ ನಂತರ ಯಾವುದೇ ಕಾರಣಕ್ಕೂ ಬೀಚ್‌ಗಳಲ್ಲಿ ಬೋಟಿಂಗ್ ನಡೆಸತಕ್ಕದ್ದಲ್ಲ. ಎಲ್ಲಾ ಬಾರ್/ರೆಸ್ಟೋರೆಂಟ್/ಹೋಮ್ ಸ್ಟೇ ಗಳನ್ನು ಅಬಕಾರಿ ಕಾಯ್ದೆಯಲ್ಲಿ ನಿಗಧಿಪಡಿಸಿದ ಸಮಯದ ಒಳಗೆ ಮುಚ್ಚತಕ್ಕದ್ದು, ಬೀಚ್‌ಗಳಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಘಟನೆಗಳು ನಡೆದಲ್ಲಿ ಅಂತಹವರ ಮೇಲೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳನ್ನು ಬಳಸುವುದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ಬಳಸತಕ್ಕದ್ದಲ್ಲ.

ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಯಾವುದೇ ರೀತಿಯ ಅನುಚಿತ ವರ್ತನೆಯನ್ನು ತೋರಿಸದೇ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹೊಸ ವರ್ಷಾಚರಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಹಕರಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!