ಮಕ್ಕಳ ಪಾಲನಾ ಸಂಸ್ಥೆಯನ್ನು ನೋಂದಣಿ ಮಾಡುವ ಬಗ್ಗೆ
ಕಾರವಾರ.ಜ. 04, 2024: ಬಾಲನ್ಯಾಯ ಕಾಯಿದೆ 2015, ತಿದ್ದಪಡಿ ನಿಯಮ 2021, ಮಾದರಿ ತಿದ್ದುಪಡಿ 2022ರ ಕಲಂ:41(2)ರ ಪ್ರಕಾರ ಪಾಲನೆ, ಪೋಷಣೆ ಮತ್ತು ರಕ್ಷಣೆ ಸಂಬ0ಧಿಸಿದ ಮಕ್ಕಳಿಗೆ ಸಂಸ್ಥೆಯಲ್ಲಿ ವಾಸ್ತವ್ಯ ನೀಡಿದ್ದರೆ,ಅಂತಹ ಸಂಸ್ಥೆಯನ್ನು ಬಾಲನ್ಯಾಯ ಕಾಯಿದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ನೋಂದಣಿ ಮಾಡದೇ ಇದ್ದಲ್ಲಿ ಬಾಲನ್ಯಾಯ ಕಾಯಿದೆ 2015 ಕಲಂ:33, 34, 41, 42 ಮತ್ತು 72 ರಡಿ ಕಾನೂನು ಕ್ರಮ ಜರುಗಿಸಲಾಗುವುದು.
ಅದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಲನೆ, ಪೋಷಣೆ ಮತ್ತು ರಕ್ಷಣೆ ಸಂಬಂಧಿಸಿದ ಮಕ್ಕಳು ಸಂಸ್ಥೆಯಲ್ಲಿ (ವಸತಿಯುತ NGO) ವಾಸ್ತವ್ಯ ಮಾಡಿದ್ದಲ್ಲಿ ಅಂತಹ ಸಂಸ್ಥೆಗಳನ್ನು ನೋಂದಣಿ ಮಾಡಲು ದಿ:15-1-2024 ರೊಳಗಾಗಿ ಸೂಕ್ತ ಪ್ರಸ್ತಾವನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯ ದೂ.ಸಂ:08382-220182 ಸಂಪರ್ಕಿಸುವ0ತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.