ಜೂನ್ 10 ರಂದು ಜಿಲ್ಲಾ ಮಟ್ಟದ ಯುವ ಉತ್ಸವ
ಮಂಗಳೂರು,ಜೂ.09, 2023: ನಗರದ ನೆಹರು ಯುವ ಕೇಂದ್ರದ ನೇತೃತ್ವದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಎನ್.ಎಸ್.ಎಸ್. ಘಟಕ, ಡಾ.ಪಿ ದಯಾನಂದ ಪೈ- ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜಿ ಕಾಲೇಜು ಹಾಗೂ ಜಿಲ್ಲಾ ಯುವ ಒಕ್ಕೂಟದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವ ಜೂನ್ 10ರ ಶನಿವಾರ ಬೆಳಗ್ಗೆ 9.30ಕ್ಕೆ ನಗರದ ಮಿನಿ ಟೌನ್ಹಾಲ್ನಲ್ಲಿ ನಡೆಯಲಿದೆ.
ಯುವ ಉತ್ಸವದಲ್ಲಿ ಯುವ ಕಲಾವಿದರ ಚಿತ್ರಕಲೆ ಶಿಬಿರ ಸ್ಪರ್ಧೆ, ಯುವ ಕವಿತೆ ಬರಹಗಾರರ ಶಿಬಿರ ಸ್ಪರ್ಧೆ, ಮೊಬೈಲ್ ಫೋಟೋಗ್ರಫಿ, ಸ್ಪರ್ಧಾತ್ಮಕ ಕಾರ್ಯಾಗಾರ, ಭಾಷಣ ಸ್ಪರ್ಧೆ, ಸಾಂಸ್ಕೃತಿಕ ಉತ್ಸವಗಳು ನಡೆಯಲಿವೆ.
ಕಾರ್ಯಕ್ರಮವನ್ನು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ಉದ್ಘಾಟಿಸುವರು. ಶಾಸಕರಾದ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು.