ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಪುನಶ್ಚೇತನ ಶಿಬಿರ ಉದ್ಘಾಟನೆ

 ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಪುನಶ್ಚೇತನ ಶಿಬಿರ ಉದ್ಘಾಟನೆ
Share this post

ವ್ಯಕ್ತಿಗಿಂತ ಸಂಸ್ಥೆ ದೊಡ್ಡದು: ಡಾ. ಚಿನ್ನಪ್ಪಗೌಡ

ಮಂಗಳೂರು, ಮೇ 29, 2023: ಸಂಘಟನೆಯನ್ನು ಕೆಡಹುವ ಮಾತಿಗಿಂತ ಕಟ್ಟುವ ಪರ್ಯಾಯ ದಾರಿಗಳ ಶೋಧ ಮುಖ್ಯ. ವ್ಯಕ್ತಿಗಿಂತ ಸಂಸ್ಥೆ ಮುಖ್ಯ ಎಂಬುದನ್ನು ಸಂಘಟನೆಯಲ್ಲಿರುವ ಎಲ್ಲರೂ ಅರಿತಿರಬೇಕು. ಪರಿಣಾಮಕಾರಿ ಸಂವಹನ ಮತ್ತು ಸಮನ್ವಯದಿಂದ ಬಲಿಷ್ಠ ಸಂಘಟನೆ ಸಾಧ್ಯ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಹಾವೇರಿ ವಿಶ್ರಾಂತ ಕುಲಪತಿ ಪ್ರೊ.ಕೆ ಚಿನ್ನಪ್ಪಗೌಡ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಮಂದಿರದಲ್ಲಿ ನಡೆದ ಪದಾಧಿಕಾರಿಗಳ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡದ ವಿವಿಧ ಘಟಕಗಳು ಕ್ರಿಯಾಶೀಲವಾಗಿವೆ. ಪದಾಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ, ಕರ್ನಾಟಕ ಸರಕಾರದ ಕುವೆಂಪು ಭಾಷಾ ಭಾರತಿ ನಿಕಟಪೂರ್ವ ಅಧ್ಯಕ್ಷ ಡಾ.ಅಜೆಕ್ಕಳ ಗಿರೀಶ್ ಭಟ್ ಭಾಗವಹಿಸಿದರು.

ಕಸಾಪ ಬೆಂಗಳೂರು ಇದರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ.ಕೆ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಯನ್ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ ವಂದಿಸಿದರು.ಚಂದ್ರಾವತಿ ಕೆ ಸುಳ್ಯ ಪ್ರಾರ್ಥಿಸಿದರು. ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯು.ಎಚ್ ಖಾಲಿದ್ ಉಜಿರೆ ನಿರೂಪಿಸಿದರು.

ಕಾರ್ಯಾಗಾರದಲ್ಲಿ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಉಳ್ಳಾಲ, ಮೂಡುಬಿದಿರೆ, ಕಡಬ, ಮೂಲ್ಕಿ ಕಸಾಪ ತಾಲೂಕು ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!