ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ
ಮಂಗಳೂರು,ಮೇ.18, 2023: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಮೇ. 31ರವರೆಗೆ ಜಿಲ್ಲೆಯಾದ್ಯಂತ ದನ ಹಾಗೂ ಎಮ್ಮೆಗಳ ಹೆಣ್ಣು ಕರುಗಳಿಗೆ ಉಚಿತವಾಗಿ 2ನೇ ಸುತ್ತಿನ, 2ನೇ ಹಂತದ ಕಂದು ರೋಗ (ಬ್ರುಸೆಲ್ಲೋಸಿಸ್) ವಿರುದ್ದ ಲಸಿಕೆ ನೀಡಲಾಗುತ್ತಿದೆ.
ರೋಗ ಲಕ್ಷಣಗಳು:
ಕಂದು ರೋಗವು ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದ್ದು, ಜಾನುವಾರುಗಳಲ್ಲಿ ಜ್ವರ, ಗರ್ಭಪಾತ, ಗರ್ಭಧಾರಣೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಪ್ರಾಣಿ ಜನ್ಯ ರೋಗವಾಗಿದ್ದು, ಮನುಷ್ಯರಿಗೂ ಹರಡಬಹುದಾಗಿದೆ. ಇದರ ಚಿಕಿತ್ಸೆ ದುಬಾರಿ ಮತ್ತು ತ್ರಾಸದಾಯಕವಾಗಿದ್ದು, ರೈತರಿಗೆ ತುಂಬಾ ಆರ್ಥಿಕ ನಷ್ಟ ಉಂಟು ಮಾಡುತ್ತದೆ.
ಆದ್ದರಿಂದ ರೈತ ಭಾಂದವರು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ, 4ರಿಂದ 8ತಿಂಗಳ ವಯಸ್ಸಿನ ಹೆಣ್ಣು ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.