ಮಂಗಳೂರು ಜೀವವಿಮಾ ನಿಗಮದ ವತಿಯಿಂದ ಶಾಖೆಯ ಅಭಿವೃದ್ಧಿ ಅಧಿಕಾರಿ ಜಗದೀಶ್ ವಿ ಗೋಳಿ ಅವರಿಗೆ ಬೀಳ್ಕೊಡುಗೆ

 ಮಂಗಳೂರು ಜೀವವಿಮಾ ನಿಗಮದ ವತಿಯಿಂದ ಶಾಖೆಯ ಅಭಿವೃದ್ಧಿ ಅಧಿಕಾರಿ ಜಗದೀಶ್ ವಿ ಗೋಳಿ ಅವರಿಗೆ ಬೀಳ್ಕೊಡುಗೆ
Share this post

ಮಂಗಳೂರು ಆ 06, 2022: ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಪ್ರಥಮ ಶಾಖೆಯ ಅಭಿವೃದ್ಧಿ ಅಧಿಕಾರಿ ಜಗದೀಶ್ ವಿ ಗೋಳಿ ಅವರಿಗೆ ಜೀವವಿಮಾ ನಿಗಮದ ವತಿಯಿಂದ ಬೀಳ್ಕೋಡಲಾಯಿತು.

ಶಾಖೆಯ ಹಿರಿಯ ಪ್ರಬಂಧಕರಾದ ತುಳಸೀದಾಸ್ ವಿ. ಪವಸ್ಕರ್ ಅವರು ಮಾತನಾಡುತ್ತ ಜೀವವಿಮಾ ನಿಗಮದ ಬೆಳವಣಿಗೆಯಲ್ಲಿ ಜಗದೀಶ್ ಅವರ ಕೊಡಗೆ ಅಪಾರವಿದೆ ಎಂದು ಅವರ ಕಾರ್ಯವೈಖರಿಯನ್ನು ನೆನಪಿಸಿದರು.

ಈ ಸಂದರ್ಭದಲ್ಲಿ ಜಗದೀಶ್ ವಿ. ಗೋಳಿ ದಂಪತಿ ಮತ್ತು ಮಕ್ಕಳನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡುವ ಮೂಲಕ ಸನ್ಮಾನಿಸಿ ಬೀಳ್ಕೋಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ್ ವಿ. ಗೋಳಿ ಅವರು ಸಂಸ್ಥೆಯಿಂದ ನನಗೆ ಬಹಳಷ್ಟು ಅನುಭವಗಳನ್ನು ಪಡೆದುಕೊಂಡಿದ್ದೇನೆ ವೃತ್ತಿಜೀವನದಲ್ಲಿ ತೃಪ್ತಿ, ನೆಮ್ಮದಿ, ಸ್ನೇಹಗಳಿಸಲು ಒಳ್ಳೆಯ ಅವಕಾಶ ನೀಡಿದೆ ಎಂದು ಹೇಳಿದರು.

ಉಪಪ್ರಬಂಧಕರಾದ ದೀಪಕ್ ವಿ ಹಾಗೂ ಏಜೆಂಟರು ಇನ್ನಿತರರು ಉಪಸ್ಥಿತರಿದ್ಧರು. ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ವಪ್ನ ಎಸ್. ಶೆಟ್ಟಿ ಅವರು ಧನ್ಯವಾದವನ್ನು ಅರ್ಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!