ಮೇ. 20, 21ರಂದು ವಿದ್ಯುತ್ ವ್ಯತ್ಯಯ
ಮಂಗಳೂರು,ಮೇ.19, 2022: 33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಮಾರ್ಕೆಟ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳು ನಡೆಯಲಿರುವ ಕಾರಣ ಮೇ.20ರಂದು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆ.ಹೆಚ್.ಎಸ್. ರಸ್ತೆ, ಪಿ.ಎಂ. ರಾವ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಅತ್ತಾವರ:
33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ವಿಶ್ವಭವನ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ನಡೆಯಲಿರುವ ಕಾರಣ ಮೇ.21ರಂದು ಬೆಳಿಗ್ಗೆ 10 ರಿಂದ 5ರವರೆಗೆ ಓಲ್ಡ್ ಬಸ್‍ಸ್ಟ್ಯಾಂಡ್, ಕೆ.ಎಸ್.ರಾವ್ ರೋಡ್, ಹಂಪನಕಟ್ಟೆ, ಶರವು ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಕುಲಶೇಖರ:
110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಅಡ್ಯಾರ್ ಮತ್ತು 11ಕೆವಿ ಕಣ್ಣೂರು ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡ ಕಾರಣ ಮೇ.21ರ ಬೆಳಿಗ್ಗೆ 10 ರಿಂದ 5ರವರೆಗೆ ಅಡ್ಯಾರ್, ಅಡ್ಯಾರ್ ಪದವು, ವಳಚ್ಚಿಲ್, ವಳಚ್ಚಿಲ್ ಪದವು, ಅರ್ಕುಳ, ಮೇರ್ಲಪದವು, ಮೇರೆಮಜಲು, ತುಪ್ಪೆಕಲ್ಲು, ಕಣ್ಣೂರು, ಕೊಡಕ್ಕಲ್, ಬಲ್ಲೂರು, ಚೆಕ್ಪೋಸ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.