ಪಿ.ಎಂ ಕಿಸಾನ್ ಸಮ್ಮಾನ್: ಇ-ಕೆವೈಸಿ ಮಾಡಿಸಲು ಸೂಚನೆ

 ಪಿ.ಎಂ ಕಿಸಾನ್ ಸಮ್ಮಾನ್: ಇ-ಕೆವೈಸಿ ಮಾಡಿಸಲು ಸೂಚನೆ
Share this post

ಮಂಗಳೂರು,ಮಾ.24, 2022: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು 2022ರ ಮಾ.31ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

ಪಿ.ಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮುಂದಿನ ಕಂತುಗಳನ್ನು ಪಡೆಯಲು ನೋಂದಾಯಿತ ಬ್ಯಾಂಕ್ ಖಾತೆಗೆ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಿ NPCI Mapping ಮಾಡಿಸಲು ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು.

ಇ-ಕೆವೈಸಿ ಮಾಡಿಸಲು ರೈತರು ಕೇಂದ್ರ ಸರ್ಕಾರದ ಜಾಲತಾಣ https://pmkisan.gov.in/ ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ ನೋಂದಾಣಿಯಾದ ಮೊಬೈಲ್ ಸಂಖ್ಯೆ ದಾಖಲಿಸಬೇಕು ಅಥವಾ ಹತ್ತಿರ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಬಹುದು.

ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!