ಸಿ.ಪಿ.ಐ.ಎಂ ಮಂಜೇಶ್ವರ ಏರಿಯಾ ಸಮ್ಮೇಳನದ ಅಂಗವಾಗಿ ದೈಗೋಳಿಯಲ್ಲಿ ಮಕ್ಕಳ ಆಟಕೂಟ
ಮಂಗಳೂರು, ಡಿ 06, 2021: ಸಿ.ಪಿ.ಐ.ಎಂ ಮಂಜೇಶ್ವರ ಏರಿಯಾ ಸಮ್ಮೇಳನದ ಅಂಗವಾಗಿ ಕೊಡ್ಲಮೊಗರು ಲೋಕಲ್ ಸಮಿತಿ ನೇತ್ರತ್ವದಲ್ಲಿ ದೈಗೋಳಿಯ ಶ್ರೀ ಕ್ರಷ್ಣ ಕ್ರಪಾ ಹಾಲ್ ನಲ್ಲಿ ಮಕ್ಕಳ ಆಟಕೂಟ ಕಾರ್ಯಕ್ರಮವು ಜರುಗಿತು.
ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀ.ನಿರ್ಮಲ್ ಕುಮಾರ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು.
“ಇಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಾಧ್ಯವಾಗಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಹೆಮ್ಮರವಾಗಿ ಬೆಳೆಸಲು ಇಂತಹ ಶಿಬಿರಗಳು ನಾಂದಿ ಹಾಡಬೇಕು,” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬಾಲಸಂಘದ ಕೊಡ್ಲಮೊಗರು ವಿಲ್ಲೇಜ್ ಸಮಿತಿ ಅಧ್ಯಕ್ಷರಾದ ನಿಕೇತ್ ರವರು ವಹಿಸಿದ್ದರು
ದಿನ ಪೂರ್ತಿ ಜರುಗಿದ ಮಕ್ಕಳ ಆಟಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ಮಲ್ ಕುಮಾರ್ ಮಾಸ್ಟರ್ ಹಾಗೂ ಮಂಗಳೂರಿನ ಖ್ಯಾತ ಕಲಾವಿದ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯ ವಿಸ್ಮಯ ಜಾದೂ ತಂಡದ ಸದಸ್ಯ ಪ್ರವೀಣ್ ಬಜಾಲ್ ತಮ್ಮ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿದರು .
ಕಾರ್ಯಕ್ರಮದಲ್ಲಿ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ವಿ.ಕುಂಞರಾಮನ್, ಬಾಲಸಂಘದ ಕಾಸರಗೋಡು ಜಿಲ್ಲಾ ಮುಖಂಡರಾದ ಭಾರತಿ ಎಸ್, ಸಮ್ಮೇಳನದ ಸ್ವಾಗತ ಸಮಿತಿಯ ಮುಖಂಡರಾದ ಕೆ.ಆರ್.ಜಯಾನಂದ, ಕನ್ವಿನರ್ ಡಿ.ಬೂಬ, ರವೀಂದ್ರ ಎಂ, ಬಾಲಸಂಘದ ಮಂಜೇಶ್ವರ ಏರಿಯಾ ನಾಯಕರಾದ ಪ್ರಶಾಂತ್ ಕನಿಲ, ಸಿ.ಪಿ.ಐ.ಎಂ ದ. ಕ ಜಿಲ್ಲಾ ನಾಯಕರಾದ ಸುನಿಲ್ ಕುಮಾರ್, ಮಂಜೇಶ್ವರ ಏರಿಯಾ ನಾಯಕರಾದ ಚಂದ್ರಹಾಸ ಶೆಟ್ಟಿ, ಗೀತಾ ಸಾಮಾನಿ, ಅರವಿಂದ, ಡಿ.ಕಮಾಲಾಕ್ಷ, ಕೆ.ಕಮಾಲಾಕ್ಷ, ಬೇಬಿ ಶೆಟ್ಟಿ, ನವೀನ್ ತಚ್ಚಿರೆ, ಪುರುಷೋತ್ತಮ ಬಳ್ಳೂರ್, ಸಿ.ಪಿ.ಐ.ಎಂ ಕೊಡ್ಲಮೊಗರು ನಾಯಕರು, ಬಾಲಸಂಘದ ರಕ್ಷಾಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು .
ಬಾಲಸಂಘದ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯರಾದ ಭಾರತಿ ಎಸ್ ರವರು ಸ್ವಾಗತಿಸಿದರು. ಸ್ವಾಗತ ಸಮಿತಿ ಮುಖಂಡ ರವೀಂದ್ರ ಎಂ ವಂದಿಸಿದರು.