ಚಿಗುರು ಕಲಾ ವೇದಿಕೆಯಿಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ

 ಚಿಗುರು ಕಲಾ ವೇದಿಕೆಯಿಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ
Share this post

ನವ ತಲೆಮಾರು ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ – ಮಹಮ್ಮದ್ ಬಡ್ಡೂರು

ಮಂಗಳೂರು ನ 11, 2021: ಚಿಗುರು ಕಲಾ ವೇದಿಕೆ ಕರ್ನಾಟಕ ವತಿಯಿಂದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಮಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಗುರು ಕಲಾ ವೇದಿಕೆ ಕರ್ನಾಟಕ ಸಂಚಾಲಕರಾದ ಆರಿಫ್ ಚಿಕ್ಕಮಗಳೂರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬಹುಭಾಷಾ ಕಲಾವಿದರಾದ ಮಹಮ್ಮದ್ ಬಡ್ಡೂರುರವರು ಮಾತನಾಡಿ ಇಂದಿನ ನವ ತಲೆಮಾರಿನ ಯುವಕ, ಯುವತಿಯರಿಗೆ ಅದ್ಬುತವಾದ ಕೌಶಲ್ಯಗಳಿವೆ ಆದರೆ ಅದನ್ನು ಸಮಾಜಕ್ಕೆ ಉಪಕರಿಸುವಂತೆ ಉಪಯೋಗಿಸುವುದರಲ್ಲಿ ಎಡವಿದ್ದಾರೆ, ನವ ತಲೆಮಾರು ಕಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಚಿಗುರು ಕಲಾ ವೇದಿಕೆಯು ಚಿಗುರುವ ಕಲಾಗಾರರಿಗೆ ಮಾರ್ಗದರ್ಶನವಾಗಿರಲಿ ಎಂದು ಹಾರೈಸಿದರು.

ಚಿಗುರು ಕಲಾ ವೇದಿಕೆಯಿಂದ ನಡೆಸಿದ “ಟಾಕ್ ಪರ್ಫೆಕ್ಟ್”, “ಕಲಾ ಸಿಂಚನ” , “ಸ್ವಾತಂತ್ರ್ಯ ಹಾಡು” ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ಹದಿನೆಂಟು ಮಂದಿಗೆ ಬಹುಮಾನ ವಿತರಿಸಲಾಯಿತು.

ಚಿಗುರು ಕಲಾ ವೇದಿಕೆ ಸದಸ್ಯರಾದ ಗೌಸಿಯಾ ಸ್ವಾಗತಿಸಿ, ನೂರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Subscribe to our newsletter!

Other related posts

error: Content is protected !!