ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಸಾರಿಗೆ ಸೌಲಭ್ಯ
ಕಾರವಾರ, ಅ 27, 2021: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ 600 ಕ್ಕೂ ಅಧಿಕ ಹೆಚ್ಚುವರಿ ಸಾರಿಗೆಗಳು ಅ. 30, 31 ಮತ್ತು ನವೆಂಬರ್ 1,3,5,7 ರಂದು ಕಾರ್ಯ ನಿರ್ವಹಿಸಲಿವೆ.
ಅ.30, 31 ರಂದು ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪೂಣೆ, ಮುಂಬಯಿ ಮತ್ತುಇನ್ನಿತರ ಪ್ರಮುಖ ನಗರಗಳಿಂದ ಹಾಗೂ ರಾಜ್ಯದ ವಿವಿಧ ಪ್ರದೇಶಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಹಾವೇರಿ, ಮತ್ತು ಬಾಗಲಕೋಟೆ ವಿಭಾಗಗಳಿಂದ ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಹಬ್ಬ ಮುಗಿದ ನಂತರ ಬೆಂಗಳೂರು, ಮತ್ತುಇತರ ನಗರಗಳಿಗೆ ತೆರಳುವ ಪ್ರಯಾಣಿಕರ ಬೇಡಿಕೆಗಳಿಗನುಗುಣವಾಗಿ ನವೆಂಬರ್ 5, 7 ರಂದು ಹೆಚ್ಚುವರಿ ವಿಶೇಷ ಸಾರಿಗೆ ವಾಹನಗಳನ್ನು ಬಿಡಲಾಗುವುದು.
ಸಾರ್ವಜನಿಕರು ಸಂಸ್ಥೆಯ ಅಧಿಕೃತ ವೆಬಸೈಟ್ www.ksrtc.in ಅಥವಾ ksrtc mobile App, ನಲ್ಲಿ ಮುಂಗಡವಾಗಿ ವೇಗಧೂತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಟಿಕೇಟ್ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.
ಈ ಹೆಚ್ಚುವರಿ ಸಾರಿಗೆಗಳ ಸದುಪಯೋಗವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.