ಕ್ಯಾಂಪಸ್ ಫ್ರಂಟ್ ವತಿಯಿಂದ ಉಚಿತ ಸ್ಕಾಲರ್ಶಿಪ್ ಅಭಿಯಾನ

 ಕ್ಯಾಂಪಸ್ ಫ್ರಂಟ್ ವತಿಯಿಂದ ಉಚಿತ ಸ್ಕಾಲರ್ಶಿಪ್ ಅಭಿಯಾನ
Share this post

ಮಂಗಳೂರು, ಅ 24, 2021: ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ವತಿಯಿಂದ ಉಚಿತ ಸ್ಕಾಲರ್ಶಿಪ್ ಅಭಿಯಾನವು ಕಾವೂರು ಜಂಕ್ಷನ್ ಹಾಗೂ ಮುಲ್ಕಿಯಲ್ಲಿ ನಡೆಯಿತು.

1ನೇ ತರಗತಿಯಿಂದ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2021-22’ನೇ ಸಾಲಿನ ಪ್ರೀ ಮೆಟ್ರಿಕ್ , ಪೋಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಅರ್ಜಿಯನ್ನು ಉಚಿತವಾಗಿ ಸಲ್ಲಿಸಲಾಯಿತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಅಧ್ಯಕ್ಷರಾದ ಅಶ್ರಫ್ ಪೊರ್ಕೋಡಿ, ಕಾವೂರು ಏರಿಯಾ ನಾಯಕರು, ಮುಲ್ಕಿ ಏರಿಯಾ ನಾಯಕರು ಹಾಗೂ ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು

Subscribe to our newsletter!

Other related posts

error: Content is protected !!