ಅ.22 ರಂದು ಕೋವಿಡ್ ಲಸಿಕಾ ಮೇಳ

 ಅ.22 ರಂದು ಕೋವಿಡ್ ಲಸಿಕಾ ಮೇಳ
Share this post

ಮಂಗಳೂರು, ಅ.21, 2021: ಅ.22 ರಂದು (ನಾಳೆ) ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಎಲ್ಲಾ ಸರಕಾರಿ ಆರೋಗ್ಯ ಸಂಸ್ಥೆಗಳು ಹಾಗೂ ಆ ಸಂಸ್ಥೆಗಳ ವ್ಯಾಪ್ತಿಯ 400ಕ್ಕೂ ಅಧಿಕ ಲಸಿಕಾ ಕೇಂದ್ರಗಳಲ್ಲಿ ಲಸಿಕಾಕರಣ ನಡೆಸಲಾಗುವುದು.

ಜಿಲ್ಲೆಯಲ್ಲಿ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳು ಲಭ್ಯವಿದ್ದು, ಇದೂವರೆಗೂ ಲಸಿಕೆ ಪಡೆಯದವರು ಮೊದಲನೆ ಡೋಸ್ ಹಾಗೂ ಎರಡನೆಯ ಡೋಸ್ ಪಡೆಯಬೇಕಾದವರು ಲಸಿಕೆ ಪಡೆಯುವ ಮೂಲಕ ಈ ಮೇಳವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‍ ಅಂತರ 84 ದಿನ ಹಾಗೂ ಕೋವಾಕ್ಸಿನ್ ಲಸಿಕೆಯ ಎರಡನೇ ಡೋಸ್‍ನ ಅಂತರ 28 ದಿನಗಳಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!