ಪೊಲೀಸ್ ನೇಮಕಾತಿ: 24ರಂದು ಲಿಖಿತ ಪರೀಕ್ಷೆ

 ಪೊಲೀಸ್ ನೇಮಕಾತಿ: 24ರಂದು ಲಿಖಿತ ಪರೀಕ್ಷೆ
Share this post

ಮಂಗಳೂರು ಅ.17, 2021: ಜಿಲ್ಲೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅ.24ರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಲಿಖಿತ ಪರೀಕ್ಷೆಗಳನ್ನು ಉಜಿರೆಯ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.

ಪರೀಕ್ಷಾ ಕೇಂದ್ರಗಳ ವಿವರ:

  • ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು – ಉಜಿರೆ,
  • ಶ್ರೀ ಮಂಜುನಾಥೇಶ್ವರ ಪದವಿ ಕಾಲೇಜು – ಉಜಿರೆ,
  • ಶ್ರೀ ಮಂಜುನಾಥೇಶ್ವರ ಪಿ.ಜಿ ಕಾಲೇಜು – ಉಜಿರೆ,
  • ಶ್ರೀ ಮಂಜುನಾಥೇಶ್ವರ ಐ.ಟಿ ಕಾಲೇಜು – ಉಜಿರೆ,
  • ಶ್ರೀ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು – ಉಜಿರೆ
  • ಶ್ರೀ ಮಂಜುನಾಥೇಶ್ವರ ಸಿಬಿಎಸ್‍ಬಿ ಸ್ಕೂಲ್ – ಉಜಿರೆ.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 8.30ಕ್ಕೆ ಹಾಜರಿರಬೇಕು, ಪರೀಕ್ಷಾ ಹಾಜರಾತಿ ಹಾಳೆಗಳನ್ನು ಹಾಗೂ ಇತರೆ ಮಾಹಿತಿಯನ್ನು www.recruitment.ksp.gov.in ಗೆ ಭೇಟಿ ಪರಿಶೀಲಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!