ಜಿಲ್ಲಾಧಿಕಾರಿಗಳಿಂದ ಅಮರ ಮಡ್ನೂರು, ಪಡ್ನೂರಿನಲ್ಲಿ ಗ್ರಾಮವಾತ್ಸವ್ಯ

 ಜಿಲ್ಲಾಧಿಕಾರಿಗಳಿಂದ ಅಮರ ಮಡ್ನೂರು, ಪಡ್ನೂರಿನಲ್ಲಿ ಗ್ರಾಮವಾತ್ಸವ್ಯ
Share this post

ಸಚಿವರಾದ ಎಸ್. ಅಂಗಾರರಿಂದ ಚಾಲನೆ

ಮಂಗಳೂರು, ಅ.16, 2021: ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ. ಸುಳ್ಯ ತಾಲೂಕಿನ ಅಮರ ಮುಡ್ನೂರು ಹಾಗೂ ಅಮಾರಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮಸ್ಥರ ಅಹವಾಲು ಆಲಿಸಲು ಹಾಗೂ ಕೆಲವೋಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಸಿಕೊಡಲು ಶನಿವಾರ ಕುಕ್ಕುಜಡ್ಕದ ಕೃಷಿ ಪತ್ತಿನ ಪ್ರಾಥಮಿಕ ಸಹಕಾರಿ ಸಂಘದ ಅಮರ ಸಹಕಾರ ಸಭಾಭವನ ಗ್ರಾಮವಾಸ್ತವ್ಯ ಕೈಗೊಂಡರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಲ್ಲಾಳ್, ತಹಶೀಲ್ದಾರ್ ಕುಮಾರಿ ಅನೀತಾ ಲಕ್ಷ್ಮಿ, ಉಪ ತಹಶೀಲ್ದಾರ್ ಚಂದ್ರಕಾಂತ್,  ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಆಕಾಶ್,  ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮಪ್ರಿಯಾ ಮೇಲ್ತೋಟ, ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.

Subscribe to our newsletter!

Other related posts

error: Content is protected !!