ಕೊರೊನಾ ನಿಯಂತ್ರಣ ಕಾನೂನು ಕರ್ನಾಟಕದಲ್ಲಿ ಪೂರ್ಣ ರದ್ದಾಗಲಿ
ಮಾನ್ಯ ಪ್ರಧಾನ ಮಂತ್ರಿ
ನರೇಂದ್ರ ಮೋದಿಯವರೇ
ನಿಮ್ಮ ನೇತೃತ್ವದಲ್ಲಿರುವ ಕೇಂದ್ರ ಸರ್ಕಾರದ ಮಂತ್ರಿಗಳು ಕೊರೊನಾ ನಿಯಮ ಉಲ್ಲಂಘನೆ ಮಾಡಿ ಸಾವಿರಾರು ಜನರ ಜಾಥಾ ನಡೆಸುತ್ತಿದ್ದಾರೆ. ಇದೇ ರೀತಿ ಬೇರೆಯವರೂ ಉಲ್ಲಂಘನೆ ಮಾಡಿದ್ದು ಇದೆ. ಆದರೆ ತಾವು ಸರ್ಕಾರ ನಡೆಸಿ ಜನರ ಮೇಲೆ ಕಾನೂನು ಮತ್ತು ನಿಯಮ ರೂಪಿಸಿ, ಜಾರಿಗೆ ತರುವವರು. ಬೇರೆಯವರು ಮಾಡಿದರೆ ಶಿಕ್ಷೆ ಕೊಡುವ ಸ್ಥಾನದಲ್ಲಿ ತಾವು ತಮ್ಮ ಮಂತ್ರಿ ಮಂಡಲ ಇದೆಯಲ್ಲವೇ.
ಹೀಗಿರುವಾಗ ಜನಸಾಮಾನ್ಯರಿಗೆ ಮಾತ್ರ ಕೊರೊನಾ ನಿಯಮ ಹೇರುವುದು ಯಾಕೆ? ಇನ್ನು ಮುಂದೆ ಕೊರೊನಾ ನಿಯಂತ್ರಣ ಕಾನೂನಗಳನ್ನು ಸಂಪೂರ್ಣ ಹಿಂದಕ್ಕೆ ಪಡೆಯುವುದು ಸೂಕ್ತ. ಇದರಿಂದ ಬಡವರು, ದುಡಿಯುವ ವರ್ಗ ತಮ್ಮ ಬದುಕು ನಿರ್ಮಿಸಿಕೊಳ್ಳುತ್ತಾರೆ.
ಜನಸಾಮಾನ್ಯರ ಹಬ್ಬಗಳಿಗೆ ನಿಷೇಧ ಹೇರಿದ್ದಾರೆ. ಕೊಟ್ಯಾಂತರ ರೂಪಾಯಿ ಹಣ ಚಲಾವಣೆಯಾಗಿ, ವ್ಯಾಪಾರ ವಹಿವಾಟು ನಡೆದು, ತೀರಾ ಆರ್ಥಿಕ ಸಂಕಷ್ಟದ ಜನ ಉಸಿರು ಬಿಡುತ್ತಿದ್ದರು. ಆದರೆ ತಮ್ಮ ಮಂತ್ರಿಗಳಿಗಾಗಿ ಈ ನಿಯಮ ಕೈ ಬಿಟ್ಟಿದ್ದಾರೆ. ಮೆರವಣಿಗೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಅದಕ್ಕಾಗಿ ಪಾಪದ ಕಾನ್ಸ್ಟೇಬಲ್ ಗಳನ್ನು ಅಮಾನತು ಮಾಡುತ್ತಾರೆ.
ಮೋದಿ ನೋಡಿ ವೋಟು ಕೇಳಿದವರು ಇವರು. ಮತ್ತು ತಮ್ಮ ನಾಯಕತ್ವದ ಅಡಿಯಲ್ಲಿ ಶಿಸ್ತಿನ ಸಿಪಾಯಿಗಳು ಇವರು. ತಮ್ಮ ನಿಲುವುಗಳನ್ನ, ತಮ್ಮ ನೇತೃತ್ವದಲ್ಲಿ ಬರುವ ನಿಯಮಗಳನ್ನು ಪಾಲಿಸಲು ತಮ್ಮ ಮಂತ್ರಿಗಳೇ ಉಲ್ಲಂಘನೆ ಮಾಡುವುದಾದರೆ, ಬಡವರಿಗೆ ನಿಯಮ ಉಲ್ಲಂಘನೆಗೆ ಶಿಕ್ಷೆ ಮತ್ತು ದಂಡ ಯಾವ ನ್ಯಾಯ ಸರ್.
ಆದ್ದರಿಂದ ತಕ್ಷಣ ಕೊರೊನಾ ತಡೆ ನಿಯಮ ಮುಕ್ತ ಮಾಡಿ ಆದೇಶ ಹೊರಡಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ.
ಇದು ನನ್ನ ನಿಲುವು. ಇದಕ್ಕೆ ಬರುವ ಯಾವುದೇ ಪ್ರತಿಕ್ರಿಯೆಗೆ ಪರ ವಿರೋಧ ಚರ್ಚೆಗೆ ನಾನು ಪಾಲುದಾರನಲ್ಲ
ಎಂ ಜಿ ಹೆಗಡೆ