ಮುಂಗಾರು ಬೆಳೆ ಸಮೀಕ್ಷೆ 2021-22
ಕಾರವಾರ ಆ 9, 2021: ಜಿಲ್ಲೆಯ ರೈತರು 2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸಬಹುದು.
ತಮ್ಮ ಜಮೀನುಗಳ ಸರ್ವೆ ನಂ/ ಹಿಸ್ಸಾ ನಂ. ಗಳಲ್ಲಿ ತಾವು ಬೆಳೆದ ಕೃಷಿ/ ತೊಟಗಾರಿಕೆ/ ರೇಷ್ಮೆ/ಅರಣ್ಯ ಹಾಗೂ ಇತರೇ ಬೆಳೆಗಳ ವಿವರಗಳನ್ನು ಛಾಯಾಚಿತ್ರ ಸಹಿತ ತಾವೇ ಸ್ವತಃ ರೈತರ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ 2021-22 ಮೂಲಕ ಅಪ್‍ಲೋಡ್ ಮಾಡಬಹುದು.
ರೈತರ ಮುಂಗಾರು ಬೆಳೆಸಮೀಕ್ಷೆ ಆ್ಯಪ್2021-22 ಅಥವಾ http://play.google.com/store/apps/details?id=com.csk.Khariffarmer2021.cropsurvey ಲಿಂಕ್ ಡೌನ್‍ಲೋಡ್ ಮಾಡಿಕೊಂಡು ಬಳಸಬಹುದಾಗಿರುತ್ತದೆ.
ತಮ್ಮಲ್ಲಿ ಸ್ಮಾರ್ಟ ಪೋನ್ ಇಲ್ಲದಿದ್ದಲ್ಲಿ ತಮ್ಮ ಸ್ನೇಹಿತರ ಅಥವಾ ಪರಿಚಯದವರ ಮೊಬೈಲ್ ಮೂಲಕ ಅಥವಾ ತಮ್ಮ ಗ್ರಾಮಕ್ಕೆ ನೇಮಕಗೊಂಡ ಖಾಸಗಿ ನಿವಾಸಿ (ಪಿ.ಆರ್) ಮೂಲಕ ಮುಂಗಾರು ಬೆಳೆ ವಿವರಗಳನ್ನು ದಾಖಲಿಸಬಹುದಾಗಿದೆ.
ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ ಪಡೆಯಲು ಮತ್ತು ಬೆಳೆನಷ್ಟ ಪರಿಹಾರ, ಬೆಳೆವಿಮೆ ಪರಿಹಾರ, ಕನಿಷ ಬೆಂಬಲ ಬೆಲೆ ಯೋಜನೆ, ಬೆಳೆ ಸಾಲ ಯೋಜನೆ ಹಾಗೂ ಆರ್.ಟಿ.ಸಿ (ಖಖಿಅ) ಯಲ್ಲಿ ಬೆಳೆ ವಿವರ ದಾಖಲಾತಿ ನೀಡಲು ಬಳಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೃಷಿ, ತೊಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಹುದು ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.