ಕೋಳಿ ಮತ್ತು ಪಶು ಆಹಾರ ಉತ್ಪಾದನೆ: ಪರವಾನಿಗೆ ಕಡ್ಡಾಯ
ಮಂಗಳೂರು, ಆ.07, 2021: ರಾಜ್ಯ ಕುಕ್ಕುಟ ಮತ್ತು ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987ರ ಅನ್ವಯ ಕೋಳಿ ಮತ್ತು ಪಶು ಆಹಾರಗಳ ಉತ್ಪಾದಕರು ಮತ್ತು ಮಾರಾಟಗಾರರು ಪರವಾನಿಗೆ ಹೊಂದುವುದು ಕಡ್ಡಾಯ.
ಈ ಉದ್ಯಮ/ವ್ಯವಹಾರಗಳಲ್ಲಿ ತೊಡಗಿರುವವರು ಕೂಡಲೇ ತಮ್ಮ ವ್ಯಾಪ್ತಿಯ ಸ್ಥಳೀಯ ಇಲಾಖೆಯ ಪಶುವೈದ್ಯರನ್ನು ಸಂಪರ್ಕಿಸಿ, ತಮ್ಮ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದನೆ ಅಥವಾ ಮಾರಾಟ ಘಟಕದ ಪರವಾನಗಿ ನೋಂದಣಿ ಮತ್ತು ನವೀಕರಣ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಮೊ. ಸಂ: 9141010419 ಗೆ ಸಂಪರ್ಕಿಸುವಂತೆ ಮಂಗಳೂರಿನ ಪಾಲಿಕ್ಲಿನಿಕ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.