ಸಕಾಲ ಸೇವೆಗಳ ಅಡಿ ಅರ್ಜಿ ವಿಲೇವಾರಿಯಲ್ಲಿ ಉಡುಪಿ ಜಲ್ಲೆ ಪ್ರಥಮ ಸ್ಥಾನ

 ಸಕಾಲ ಸೇವೆಗಳ ಅಡಿ ಅರ್ಜಿ ವಿಲೇವಾರಿಯಲ್ಲಿ ಉಡುಪಿ ಜಲ್ಲೆ ಪ್ರಥಮ ಸ್ಥಾನ
Share this post

ಉಡುಪಿ, ಜುಲೈ 03, 2021: ಸಕಾಲ ಯೋಜನೆಯಡಿಯ ವಿಳಂಬ ರಹಿತ ಅರ್ಜಿ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆಯು ಜುಲೈ
ಮಾಹೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಕಾರ್ಯ
ನಿರ್ವಹಿಸುವುದರೊಂದಿಗೆ ಪ್ರಥಮ ಸ್ಥಾನ ಹೊಂದಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡುತ್ತಿದ್ದರು.

ಸಕಾಲ ಯೋಜನೆಯು ನಾಗರಿಕರಿಗೆ ಸರಕಾರದ ಸೇವೆಯನ್ನು ನಿಗದಿತ ಕಾಲಾವಧಿಯಲ್ಲಿ ಒದಗಿಸುವ ಪ್ರಮುಖ
ಯೋಜನೆಯಲ್ಲಿ ಒಂದಾಗಿದ್ದು, ಸಾರ್ವಜನಿಕರು ಸರಕಾರದ 101 ವಿವಿಧ ಇಲಾಖೆಗಳಲ್ಲಿ 1,112 ಸೇವೆಗಳಿಗೆ ನಿಗದಿತ
ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿ, ಸೇವೆಯ ಪ್ರಯೋಜನೆವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ವಿವಿಧ ಸೇವೆಗಳನ್ನು ಪಡೆಯಲು ನಾಗರಿಕರು ಸಲ್ಲಿಸುವ ಅರ್ಜಿಗಳ ತಿರಸ್ಕಾರದ ಪ್ರಮಾಣವನ್ನು ಆದಷ್ಟು ಕಡಿಮೆ
ಮಾಡಬೇಕು. ಸಕಾರಣವಿಲ್ಲದೆ ಯಾವುದೇ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು ಒಂದೊಮ್ಮೆ ತಿರಸ್ಕಾರ ಮಾಡುವಾಗ
ಸರಿಯಾದ ಕಾರಣವನ್ನು ನೀಡಬೇಕು ಎಂದರು.

ಪ್ರಸ್ತುತ ಮಾಹೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸರ್ಕಾರದ ಅಡಿಯಲ್ಲಿ 59,237 ಅರ್ಜಿಗಳು ಬಂದಿದ್ದು
ಅವುಗಳಲ್ಲಿ 52,511 ಅರ್ಜಿಗಳು ಪುರಸ್ಕೃತಗೊಮಡು 1,094 ಅರ್ಜಿಗಳು ತಿರಸ್ಕೃತಗೊಂಡಿವೆ.

ಸಕಾಲ ಯೋಜನೆಯು 2011 ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದ್ದು ಈವರೆಗೆ 6.53 ಕೋಟಿ ಅರ್ಜಿಗಳು ಬಂದಿದ್ದು
ಅವುಗಳಲ್ಲಿ 5.98 ಕೋಟಿಯಷ್ಟು ಪುರಸ್ಕೃತಗೊಂಡು 45.02 ಲಕ್ಷ ತಿರಸ್ಕೃತಗೊಂಡು 6.43 ಕೋಟಿ ವಿಲೇವಾರಿಯಾಗಿದೆ
ಎಂದರು. ಈವರೆಗೆ ಜಿಲ್ಲೆಯಲ್ಲಿ 14.15 ಲಕ್ಷ ಅರ್ಜಿಗಳು ಬಂದಿದ್ದು, ಅವುಗಳಲ್ಲಿ 13.58 ರಷ್ಟು ಅರ್ಜಿಗಳು ಪುರಸ್ಕೃತಗೊಂಡು
42,194 ಅರ್ಜಿಗಳು ವಿಲೇವಾರಿಗೊಂಡಿವೆ.

ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಕಾಲ ಯೋಜನೆಯ ನೋಡೆಲ್ ಅಧಿಕಾರಿಗಳು
ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!