ಅರೋಗ್ಯ ಇಲಾಖೆ : ಜುಲೈ 31 ರಂದು ನೇರ ಸಂದರ್ಶನ

 ಅರೋಗ್ಯ ಇಲಾಖೆ : ಜುಲೈ 31 ರಂದು ನೇರ ಸಂದರ್ಶನ
Share this post

ಮಂಗಳೂರು, ಜು.28, 2021: ಡಿಎಚ್‍ಒ ಅಧೀನದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಗಂಟಲು ದ್ರವ ಮಾದರಿ ಸಂಗ್ರಹಕ್ಕೆ (ಸ್ಕ್ವೇಬ್ ಕಲೆಕ್ಟರ್) 25 ಅರ್ಹ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ನೇಮಕಕ್ಕೆ 2021ರ ಜುಲೈ 31ರ ಶನಿವಾರ ಬೆಳಿಗ್ಗೆ 10.30ಕ್ಕೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನೇರ ಸಂದರ್ಶನ ಕರೆಯಲಾಗಿದೆ.

2021ರ ಸೆಪ್ಟೆಂಬರ್ 30 ರವರೆಗೆ ಕರ್ತವ್ಯ ನಿರ್ವಹಿಸಲು ಈ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು,  ಡಿ.ಎಂ.ಎಲ್.ಟಿ., ಅರೆವೈದ್ಯಕೀಯ ಪದವೀಧರರು, ಡಿಪ್ಲೋಮ, ವಿಜ್ಞಾನ ಪದವೀಧರರು ಅರ್ಜಿ ಸಲ್ಲಿಸಬಹುದು.

ಅರ್ಹರು ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಢೀಕರಣ ನಕಲು ಪ್ರತಿಗಳು, ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗೆ 0824- 242372 ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!