ಮಂಗಳೂರು: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

 ಮಂಗಳೂರು: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
Share this post


ಮಂಗಳೂರು, ಜು.22, 2021: ಇಲ್ಲಿನ 33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಭಗವತಿನಗರ ಮತ್ತು 11ಕೆವಿ ಪ್ರಗತಿನಗರ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಜುಲೈ 23ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪ್ರಗತಿ ಸರ್ವಿಸ್ ಸ್ಟೇಷನ್, ಪಿ.ವಿ.ಎಸ್ ಕಲಾಕುಂಜ, ಬೆಸೆಂಟ್ ಕಾಲೇಜು, ಸಿಟಿ ಪಾಯಿಂಟ್, ಶಾರದಾ ವಿದ್ಯಾಲಯ, ಭಗವತಿನಗರ, ಕಟ್ಟೆಮಾರ್, ಡೊಂಗರಕೇರಿ, ವೆಂಕಟರಮಣ ಟೆಂಪಲ್, ಕೆನರಾ ಶಾಲೆ, ಗಣಪತಿ ಮಂದಿರ, ಹೋಂಡ ಶೋರೂಂ, ಸತ್ಯಶಾಯಿ ನಸಿರ್ಂಗ್ ಹೋಂ, ಓಶಿಯನ್ ಪರ್ಲ್ ಹೋಟೆಲ್, ಅಯೋಧ್ಯ ಹೋಟೆಲ್, ಸುಧೀಂದ್ರ ಹೋಟೆಲ್, ಮಾನಸ ಟವರ್, ಪಿ.ವಿ.ಎಸ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

ಅದೇ ರೀತಿ 33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆವಿ ಪಾಂಡೇಶ್ವರ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಇದರಿಂದಾಗಿ ಜುಲೈ 24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ಎ.ಬಿ. ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಎಸ್.ಪಿ.ಆಫೀಸ್, ಪಾಂಡೇಶ್ವರ ರಸ್ತೆ, ಪಾಂಡೇಶ್ವರ ನ್ಯೂ ರಸ್ತೆ, ಮಹಾಲಿಂಗೇಶ್ವರ ಟೆಂಪಲ್, ಅಮೃತನಗರ, ರೋಸಾರಿಯೋ ಚರ್ಚ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.  

33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಸೌತ್‍ವಾರ್ಫ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಆ ಪ್ರಯುಕ್ತ  ಜುಲೈ 25ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ  ಹ್ಯಾಮಿಲ್ಟನ್ ಸರ್ಕಲ್, ಡಿ.ಸಿ.ಆಫೀಸ್, ಸೈಂಟ್ ಆನ್ಸ್, ನೀರೇಶ್ವಲ್ಯ ರೋಡ್, ಗೂಡ್ ಶೆಡ್ ರಸ್ತೆ, ಸಂಜೆವಾಣಿ, ಬದ್ರಿಯಾ ರೋಡ್, ಧಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!