ಶ್ರೀ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ
![ಶ್ರೀ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ](https://thecanarapost.com/wp-content/uploads/2021/07/SGR_2087-850x560.jpg)
![](https://thecanarapost.com/wp-content/uploads/2021/07/SGR_2084-1920x1059.jpg)
ಉಡುಪಿ, ಜುಲೈ 20, 2021: ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ ನಡೆಯಿತು.
![](https://thecanarapost.com/wp-content/uploads/2021/07/SGR_2087-1618x1200.jpg)
ಬೆಳಗ್ಗೆ ಮಠದ ಋತ್ವಿಜರು ಸುದರ್ಶನ ಹೋಮ ನಡೆಸಿದರು. ನಂತರ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮುದ್ರಾಧಾರಣೆ ಮಾಡಿಕೊಂಡು, ಪರ್ಯಾಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಹಾಗೂ ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
![](https://thecanarapost.com/wp-content/uploads/2021/07/SGR_2092-1789x1200.jpg)
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಪರ್ಯಾಯ ಮಠಾಧೀಶರು ರಾಜಾಂಗಣದಲ್ಲಿ ಭಕ್ತಾದಿಗಳಿಗೆ ಮುದ್ರಾಧಾರಣೆ ನಡೆಸಿದರು.
![](https://thecanarapost.com/wp-content/uploads/2021/07/SGR_2248-1920x803.jpg)
ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಭಕ್ತರಿಗೆ ತಮ್ಮ ಮಠದಲ್ಲಿ ಮುದ್ರಾಧಾರಣೆ ನಡೆಸಿದರು.
![](https://thecanarapost.com/wp-content/uploads/2021/07/SGR_2181-1908x1200.jpg)