ಕದ್ರಾ ಜಲಾಶಯದ ಮಟ್ಟ ಹೆಚ್ಚಳ : ಮುನ್ನೆಚ್ಚರಿಗೆ ಸೂಚನೆ

 ಕದ್ರಾ ಜಲಾಶಯದ ಮಟ್ಟ ಹೆಚ್ಚಳ : ಮುನ್ನೆಚ್ಚರಿಗೆ ಸೂಚನೆ
Share this post

ಕಾರವಾರ ಜುಲೈ. 14, 2021: ಕಾಳಿನದಿ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರಗಳಾಗಿದ್ದು, ಜುಲೈ 14 ಬೆಳಿಗ್ಗೆ 8.00 ಗಂಟೆಗೆ ಜಲಾಶಯ ಮಟ್ಟ 31.05 ಮೀಟರ್ ತಲುಪಿರುತ್ತದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ 20,707 ಕ್ಯುಸೆಕ್ಸ್ ಆಗಿದ್ದು ಜಲಾಶಯದ ಸುಕರ್ಷತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.

ಕದ್ರಾ ಅಣೆಕಟ್ಟೆಯ ಜಲಾಶಯದ ಕೆಳಭಾಗದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಜಾನುವಾರುಗಳನ್ನು ಸುರ್ಷತವಾಗಿಸುವುದಕ್ಕಾಗಿ ಮುಂಜಾಗ್ರತಾ ಕ್ರಮಕೈಗೊಳ್ಳತಕ್ಕದ್ದು ಮತ್ತು ದೋಣಿ ಸಂಚಾರ, ಮೀನುಗಾರಿಕೆ ಸೇರಿದಂತೆ ಇತರ ಚಟುವಟಿಕೆಗಳನ್ನು ನಡೆಸಬಾರದು ಎಂದು ಕದ್ರಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!