ಉಡುಪಿ: ಕೈಗಾರಿಕಾ ಸಚಿವರ ಪ್ರವಾಸ ಕಾರ್ಯಕ್ರಮ

 ಉಡುಪಿ: ಕೈಗಾರಿಕಾ ಸಚಿವರ ಪ್ರವಾಸ ಕಾರ್ಯಕ್ರಮ
Share this post

ಉಡುಪಿ ಜುಲೈ 3, 2021: ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ ಅವರು ಜುಲೈ 4, 5 ಮತ್ತು 6 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಜುಲೈ 4 ರಂದು ಮಧ್ಯಾಹ್ನ 12.30 ಕ್ಕೆ ಉಡುಪಿಗೆ ಆಗಮಿಸಿ, ವಾಸ್ತವ್ಯ ಮಾಡಲಿದ್ದಾರೆ.

ಜು. 5 ರಂದು ಮಧ್ಯಾಹ್ನ 3.30 ಕ್ಕೆ ಬೆಳಪು ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಆಕ್ಸಿಜನ್ ಘಟಕಕ್ಕೆ ಭೇಟಿ ಹಾಗೂ ಕೈಗಾರಿಕಾ ಪ್ರದೇಶದ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಸಂಜೆ 4.15 ಕ್ಕೆ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ನಂತರ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಲಿರುವರು.

ಜು. 6 ರಂದು ಬೆಳಗ್ಗೆ 9 ಗಂಟೆಗೆ ಹಡಿಲು ಭೂಮಿ ಕೃಷಿ ಆಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಕೃಷಿ ಕಾರ್ಯಕ್ರಮದ ವೀಕ್ಷಣೆ ನಡೆಸಲಿದ್ದಾರೆ. 10 ಗಂಟೆಗೆ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಸಸ್ಯೋತ್ಸವ – 25,000 ಸಸಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ.

Subscribe to our newsletter!

Other related posts

error: Content is protected !!